ಕರ್ನಾಟಕ

karnataka

ETV Bharat / bharat

ಸಿಬಿಎಸ್​​ಇ 9 ಹಾಗೂ 11ನೇ ತರಗತಿ ಫೇಲಾಗಿದ್ದ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​​! - ಸಿಬಿಎಸ್​ಇ ಪರೀಕ್ಷೆ

ಲಾಕ್​ಡೌನ್​ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆತಂಕ ಹೆಚ್ಚಿದೆ. ಇದರಿಂದ 9ನೇ ತರಗತಿ ಹಾಗೂ 11ನೇ ತರಗತಿ ಫೇಲಾಗಿದ್ದ ವಿದ್ಯಾರ್ಥಿಗಳಿಗೆ ಸಿಬಿಎಸ್​ಇ ಗುಡ್​ ನ್ಯೂಸ್ ನೀಡಿದೆ.

cbse
ಸಿಬಿಎಸ್​​ಇ

By

Published : May 14, 2020, 9:21 PM IST

ನವದೆಹಲಿ: ಈ ವರ್ಷ 9 ಮತ್ತು 11ನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮತ್ತೊಂದು ಬಾರಿ ಪರೀಕ್ಷೆ ಬರೆಯಲು ಅನುಮತಿ ಕೊಡಬೇಕೆಂದು ಸಿಬಿಎಸ್​ಇ ತನ್ನ ಅಧೀನದಲ್ಲಿ ಬರುವ ಎಲ್ಲಾ ಶಾಲೆಗಳಿಗೆ ಸೂಚಿಸಿದೆ.

ಈ ವಿದ್ಯಾರ್ಥಿಗಳಿಗೆ ಆನ್​ಲೈನ್​, ಆಫ್​ ಲೈನ್​ ಅಥವಾ ಯಾವುದಾದರೂ ಹೊಸ ರೀತಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಶಾಲೆಗಳಿಗೆ ಸೂಚನೆ ನೀಡಿದೆ. ಒತ್ತಡಕ್ಕೆ ಒಳಗಾದ ಪೋಷಕರು, ವಿದ್ಯಾರ್ಥಿಗಳಿಂದ ಮನವಿಗಳು ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಕುರಿತು ಸಿಬಿಎಸ್​ಇ ಪರೀಕ್ಷಾ ನಿಯಂತ್ರಕರು ಅಧಿಸೂಚನೆ ಹೊರಡಿಸಿದ್ದು, ದೇಶ ಈಗ ಸಂಕಷ್ಟದಲ್ಲಿದೆ. 9 ಹಾಗೂ 11ನೇ ತರಗತಿಗಳಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳೂ ಒತ್ತಡದಲ್ಲಿರುತ್ತಾರೆ. ಅವರಿಗೆ ಇನ್ನೊಂದು ಅವಕಾಶ ಕೊಟ್ಟರೆ ಸ್ವಲ್ಪ ನಿರಾಳವಾಗುತ್ತಾರೆ. ಇದರಿಂದಾಗಿ ಮತ್ತೊಂದು ಅವಕಾಶ ನೀಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ. ಇದರ ಜೊತೆಗೆ ಪರೀಕ್ಷೆಗೆ ತಯಾರಾಗಲು ಅವರಿಗೆ ಸಮಯ ನೀಡಲಾಗುತ್ತದೆ ಎಂದಿದ್ದಾರೆ.

ಸಿಬಿಎಸ್​ಇ ಅಧಿಸೂಚನೆಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ. ರಮೇಶ್​ ಪೋಕ್ರಿಯಾಲ್​ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ABOUT THE AUTHOR

...view details