ಕರ್ನಾಟಕ

karnataka

ETV Bharat / bharat

ಪರೀಕ್ಷೆ ಇಲ್ಲದೇ 10th,12th ಸಿಬಿಎಸ್​​ಇ ವಿದ್ಯಾರ್ಥಿಗಳ ತೇರ್ಗಡೆ ಮಾಡುವಂತೆ ಸಿಸೋಡಿಯಾ ಆಗ್ರಹ - ದೆಹಲಿ ಸರ್ಕಾರ

ದೇಶಾದ್ಯಂತ ಹೇರಲಾಗಿರುವ ಲಾಕ್​ಡೌನ್​ ಪರಿಣಾಮ ವಿದ್ಯಾರ್ಥಿಗಳಿಗೆ ನಡೆಯಬೇಕಾಗಿದ್ದ ಪರೀಕ್ಷೆಗಳು ಮುಂದೂಡಿಕೆಯಾಗುತ್ತಿವೆ. ಇದೀಗ ಸಿಬಿಎಸ್​ಸಿ ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳನ್ನ ತೇರ್ಗಡೆ ಮಾಡುವಂತೆ ಮನೀಷ್​ ಸಿಸೋಡಿಯಾ ಆಗ್ರಹಿಸಿದ್ದಾರೆ.

CBSE exams
CBSE exams

By

Published : Apr 29, 2020, 4:43 PM IST

Updated : Apr 29, 2020, 7:01 PM IST

ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಭಾರತ ಮೇ 3ರವರೆಗೆ ಲಾಕ್​ಡೌನ್​ ಹೇರಿ ಈಗಾಗಲೇ ಆದೇಶ ಹೊರಡಿಸಿದೆ. ಇದರ ಮಧ್ಯೆ ಕೆಲವೊಂದು ಪರೀಕ್ಷೆಗಳು ಮುಂದೂಡಿಕೆಯಾಗಿವೆ. ಜತೆಗೆ 1-9ನೇ ತರಗತಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್​ ಮಾಡಿ ಈಗಾಗಲೇ ಕೆಲ ರಾಜ್ಯಗಳು ಆದೇಶಿಸಿವೆ.

ಪರೀಕ್ಷೆ ಇಲ್ಲದೇ ಸಿಬಿಎಸ್​ಇ 10ನೇ ತರಗತಿ ಹಾಗೂ 12ನೇ ತರಗತಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ​ ಮಾಡುವಂತೆ ಸಿಸೋಡಿಯಾ ಆಗ್ರಹಿಸಿದ್ದಾರೆ. ಶಾಲೆಗಳಲ್ಲಿ ನಡೆಸಲಾಗಿರುವ ಪರೀಕ್ಷೆಗಳಲ್ಲಿ ಅವರು ತೆಗೆದುಕೊಂಡಿರುವ ಅಂಕಗಳ ಆಧಾರದ ಮೇಲೆ ತೇರ್ಗಡೆ ಮಾಡುವಂತೆ ಅವರು ಹೇಳಿದ್ದಾರೆ.

ಸಿಬಿಎಸ್​​ಇ ಪರೀಕ್ಷೆ ರದ್ಧತಿಗೆ ಆಗ್ರಹ:

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ (ಸಿಬಿಎಸ್​​ಇ) ಪರೀಕ್ಷೆ ಕೂಡ ರದ್ಧುಗೊಳಿಸಲು ಸಿಸೋಡಿಯಾ ಆಗ್ರಹಿಸಿದ್ದಾರೆ. ಶಾಲೆಗಳಲ್ಲಿ ವಿದ್ಯಾರ್ಥಿಗಳು ತೆಗೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಮುಂದಿನ ವರ್ಗಕ್ಕೆ ಪಾಸ್​ ಮಾಡುವಂತೆ ತಿಳಿಸಿದ್ದಾರೆ.

ಪರೀಕ್ಷೆ ನಡೆಸಲು ಮೊದಲ ಆದ್ಯತೆ:

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಸಿಬಿಎಸ್​ಇ ಪರೀಕ್ಷಾ ಮಂಡಳಿ, ಬಾಕಿ ಉಳಿದಿರುವ 29 ಪರೀಕ್ಷೆ ನಡೆಸುವುದೇ ಮೊದಲ ಆದ್ಯತೆ ಎಂದು ಹೇಳಿದೆ.

Last Updated : Apr 29, 2020, 7:01 PM IST

ABOUT THE AUTHOR

...view details