ಕರ್ನಾಟಕ

karnataka

ETV Bharat / bharat

ಸಿಬಿಎಸ್​ಇ ಪರೀಕ್ಷೆ  - 2021: ಖಾಸಗಿ ವಿದ್ಯಾರ್ಥಿಗಳಿಗೆ ಅರ್ಜಿ ಬಿಡುಗಡೆ

2021ನೇ ಸಾಲಿನ ಬೋರ್ಡ್​ ಎಕ್ಸಾಂ ಬರೆಯಲಿಚ್ಚಿಸುವ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಅರ್ಜಿಯನ್ನು ಸಿಬಿಎಸ್​ಇ ಬಿಡುಗಡೆ ಮಾಡಿದೆ.

CBSE Examination Form for Private Students Relea
ಖಾಸಗಿ ವಿದ್ಯಾರ್ಥಿಗಳಿಗೆ ಸಿಬಿಎಸ್​ಇ ಪರೀಕ್ಷೆ ಅರ್ಜಿ ಬಿಡುಗಡೆ

By

Published : Oct 27, 2020, 7:54 PM IST

ನವದೆಹಲಿ: ಸೆಂಟ್ರಲ್ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ (ಸಿಬಿಎಸ್‌ಇ) 2021 ನೇ ಸಾಲಿನ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆ ಬರೆಯಲಿಚ್ಚಿಸುವ ಖಾಸಗಿ ವಿದ್ಯಾರ್ಥಿಗಳಿಗೆ ಅಪ್ಲಿಕೇಶನ್‌ ಫಾರ್ಮ್‌ ಬಿಡುಗಡೆ ಮಾಡಿದೆ.

ಆಸಕ್ತ ವಿದ್ಯಾರ್ಥಿಗಳು ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್‌ cbse.nic.in ಗೆ ಭೇಟಿ ನೀಡಿ 2021ನೇ ಸಾಲಿನ ಪರೀಕ್ಷೆಗೆ ಅರ್ಜಿ‌ ಸಲ್ಲಿಸಬಹುದು. ಸಿಬಿಎಸ್​ಇ ನೋಟಿಸ್​ ಪ್ರಕಾರ 'ಎಶೆನ್ಶಿಯಲ್ ರಿಪೀಟ್'​ ಎಂದು ಘೋಷಿಲಾದ ವಿದ್ಯಾರ್ಥಿಗಳು, 2020 ರಲ್ಲಿ 'ಕಂಪಾರ್ಟ್ಮೆಂಟ್' ನಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳು ಮತ್ತು 2015 ರಿಂದ 2019 ರವರೆಗೆ 'ಫೇಲ್' ಎಂದು ಘೋಷಿಸಲ್ಪಟ್ಟ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಕೆಳಗೆ ನೀಡಲಾದ ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್‌ನ ನೇರ ಲಿಂಕ್‌ನಲ್ಲಿ ವಿದ್ಯಾರ್ಥಿಗಳು ವರ್ಗ ವಿವರಣೆಯನ್ನು ಪರಿಶೀಲಿಸಬಹುದು:

https://cbseit.in/cbse/web/pvtform/

ಸಿಬಿಎಸ್‌ಇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 10 ನೇ ತರಗತಿ ಮತ್ತು 12 ನೇ ತರಗತಿಯ ಖಾಸಗಿ ವಿದ್ಯಾರ್ಥಿಗಳ ವಿವರವಾದ ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯ ನೇರ ಲಿಂಕ್ ಈ ಕೆಳಗಿನಂತಿದೆ.

For Class 10th - https://cbse.nic.in/newsite/private/Pvt%20form%20Class%20X%202021.pdf

For Class 12th - https://cbse.nic.in/newsite/private/Pvt%20form%20Class%20XII%202021.pdf

ABOUT THE AUTHOR

...view details