ನವದೆಹಲಿ:10 ಮತ್ತು 12ನೇ ತರಗತಿಗೆ ನಡೆಯಲಿರುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಪರೀಕ್ಷಾ ದಿನಾಂಕವನ್ನು ಪರೀಕ್ಷಾ ಮಂಡಳಿ ಪ್ರಕಟಿಸಿದೆ. ಮೇ 4ರಂದು ಪರೀಕ್ಷೆಗಳು ಆರಂಭವಾಗಲಿದ್ದು, ಜೂನ್ 10ರ ವರೆಗೂ ಮುಂದುವರಿಯಲಿದೆ. ಜುಲೈ 15ರಂದು ಪರೀಕ್ಷೆಯ ಫಲಿತಾಂಶ ಹೊರಬರಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ತಿಳಿಸಿದ್ದಾರೆ.
ಸಿಬಿಎಸ್ಇ ಬೋರ್ಡ್ ಪರೀಕ್ಷಾ ದಿನಾಂಕ ಪ್ರಕಟ - CBSE exam dates to be announced today
Education Minister Ramesh Pokhriyal Nishank has already clarified that the board examinations will not be conducted in the month of February this time.
18:19 December 31
ಮಾರ್ಚ್ 1ರಂದು ಪ್ರಾಕ್ಟಿಕಲ್ ಪರೀಕ್ಷೆ ನಡೆಸಲು ಆಯಾ ಶಾಲೆಗಳಿಗೆ ಅನುಮತಿ ನೀಡಲಾಗಿದ್ದು, ಪರೀಕ್ಷಾ ವೇಳಾ ಪಟ್ಟಿಯನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದಿದ್ದಾರೆ.
ಮಾರ್ಚ್ 1ರಂದು ಪ್ರಾಕ್ಟಿಕಲ್ ಪರೀಕ್ಷೆ ನಡೆಸಲು ಆಯಾ ಶಾಲೆಗಳಿಗೆ ಅನುಮತಿ ನೀಡಲಾಗಿದ್ದು, ಪರೀಕ್ಷಾ ವೇಳಾ ಪಟ್ಟಿಯನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದಿದ್ದಾರೆ.
ಈಗಾಗಲೇ ಕೊರೊನಾ ಕಾರಣದಿಂದಾಗಿ ಮೂರು ತಿಂಗಳು ವಿಳಂಬವು ಮುಂಬರುವು ದಾಖಲಾತಿ ಮೇಲೆ ಪ್ರಭಾವ ಉಂಟುಮಾಡಲಿದೆ ಎಂಬ ಆತಂಕ ಎದುರಾಗಿತ್ತು.
ಪ್ರತಿವರ್ಷವೂ ಜನವರಿಯಲ್ಲಿಯೇ ಪರೀಕ್ಷೆ ಆರಂಭವಾಗಿ ಮಾರ್ಚ್ನಲ್ಲಿ ಅಂತ್ಯವಾಗಬೇಕಿತ್ತು ಆದರೆ ಕೊರೊನಾದಿಂದ ತಡವಾಗಿದೆ ಎಂದಿದ್ದಾರೆ. ಇದಲ್ಲದೆ ಈ ಪರೀಕ್ಷೆಯೂ ಆನ್ಲೈನ್ ನಲ್ಲಿ ನಡೆಯುವುದಿಲ್ಲ ಬರವಣಿಗೆ ರೂಪದಲ್ಲಿಯೇ ಇರಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಶಾಲೆ ಆರಂಭ: ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್.. ಶಾಲೆಗಳ ಪರಿಶೀಲನೆ ನಡೆಸಿದ ಸುರೇಶ್ ಕುಮಾರ್