ಕರ್ನಾಟಕ

karnataka

ETV Bharat / bharat

10 ಮತ್ತು 12ನೇ ತರಗತಿ ಉಳಿದ ಪರೀಕ್ಷೆ ರದ್ದು: ಸಿಬಿಎಸ್​​ಇ ಮಹತ್ವದ ನಿರ್ಧಾರ - ಸಿಬಿಎಸ್​ಇ ಪರೀಕ್ಷೆ ರದ್ದು

ದೇಶದಲ್ಲಿ ಕೊರೊನಾ ಅಟ್ಟಹಾಸ ಜೋರಾಗಿದೆ.ಇದರ ಮಧ್ಯೆ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೆ, ಸಿಬಿಎಸ್​ಇ ಪರೀಕ್ಷೆ ರದ್ದುಗೊಳಿಸಿ ಮಹತ್ವದ ಆದೇಶ ಹೊರಹಾಕಿದೆ.

CBSE cancels class X and XII exams
CBSE cancels class X and XII exams

By

Published : Jun 25, 2020, 2:35 PM IST

Updated : Jun 25, 2020, 3:12 PM IST

ನವದೆಹಲಿ:ಜುಲೈ 1ರಿಂದ ಜುಲೈ 15ರವರೆಗೆ ನಡೆಯಬೇಕಾಗಿದ್ದ ಸಿಬಿಎಸ್​ಇ 10ನೇ ಮತ್ತು 12ನೇ ತರಗತಿಯ ಉಳಿದ ಪರೀಕ್ಷೆಗಳನ್ನು ರದ್ದುಗೊಳಿಸಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್​ಇ) ಮಹತ್ವದ ನಿರ್ಧಾರ ಕೈಗೊಂಡಿದೆ.

ಜುಲೈ 1ರಿಂದ 15ರೊಳಗೆ 10 ಮತ್ತು 12ನೇ ತರಗತಿಯ 29 ಪ್ರಮುಖ ವಿಷಯಗಳಿಗೆ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಮಂಡಳಿ ಈ ಹಿಂದೆ ತಿಳಿಸಿತ್ತು. ಆದರೆ ಈ ಪರೀಕ್ಷೆಗಳಿಗೆ ತಮಿಳುನಾಡು, ಮಹಾರಾಷ್ಟ್ರ, ನವದೆಹಲಿ, ಒಡಿಶಾ ಸೇರಿದಂತೆ ಹಲವು ರಾಜ್ಯಗಳು ಪರೀಕ್ಷೆ ನಡೆಸಲು ಸಮ್ಮತಿ ಸೂಚಿಸಲಿಲ್ಲ.

ಈಗಾಗಲೇ ನಡೆದಿರುವ ಕೆಲವು ಪರೀಕ್ಷೆಗಳ ಆಧಾರದ ಮೇಲೆ ಬಾಕಿ ಇರುವ ವಿಷಯಗಳಿಗೂ ಅಂಕ ನೀಡಲು ಇದೀಗ ಸಿಬಿಎಸ್​ಇ ನಿರ್ಧರಿಸಿದ್ದಾಗಿ ಸಾಲಿಸಿಟರ್​ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್​ಗೆ ತಿಳಿಸಿದ್ದಾರೆ.

ಪರೀಕ್ಷೆಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದೇ ಅಥವಾ ಈಗಾಗಲೇ ಶಾಲೆಯಲ್ಲಿ ನಡೆಸಿರುವ ಪರೀಕ್ಷೆಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಗೊಳಿಸುತ್ತೀರಾ? ಎಂದು ಸುಪ್ರೀಂಕೋರ್ಟ್​ ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿರುವ ಅವರು, ಸಿಬಿಎಸ್​ಇ ಪರೀಕ್ಷೆಗಳಿಗೆ ಹಾಜರಾಗುವ ಆಯ್ಕೆಯನ್ನು 12ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಈಶಾನ್ಯ ದೆಹಲಿಯ ವಿದ್ಯಾರ್ಥಿಗಳಿಗೆ ಮಾತ್ರ 10ನೇ ತರಗತಿ ಪರೀಕ್ಷೆ ನಡೆಯಬೇಕಾಗಿತ್ತು. ಇದೀಗ ಅದು ರದ್ದುಗೊಂಡಿದೆ. ಒಂದು ವೇಳೆ ಪರೀಕ್ಷೆಗೆ ಹಾಜರಾಗಲು 12ನೇ ತರಗತಿ ವಿದ್ಯಾರ್ಥಿಗಳು ಇಷ್ಟಪಟ್ಟರೆ ಪರಿಸ್ಥಿತಿ ಅನುಕೂಲ ಮಾಡಿಕೊಂಡು ಅವಕಾಶ ನೀಡಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ.

12ನೇ ತರಗತಿ ಪರೀಕ್ಷೆಗಳನ್ನು ಮುಂದಿನ ದಿನಗಳಲ್ಲಿ ನಡೆಸಲು ತೀರ್ಮಾನಿಸಲಾಗುವುದು. ಪರೀಕ್ಷೆ ಬರೆಯಲು ಬಯಸದ ವಿದ್ಯಾರ್ಥಿಗಳಿಗೆ ಕಳೆದ 3 ಮೂರು ಶಾಲಾ ಪರೀಕ್ಷೆಗಳ ಆಧಾರದ ಮೇಲೆ ಅಂಕ ನೀಡಲಾಗುವುದು. ಒಂದು ವೇಳೆ ಅವರಿಂದ ಅವರು ಸಂತೋಷವಾಗದಿದ್ದರೆ ಮುಂದಿನ ದಿನಗಳಲ್ಲಿ ಪರೀಕ್ಷೆ ನಡೆಲಾಗುವುದು ಎಂದು ಸಿಬಿಎಸ್​ಇ ತಿಳಿಸಿದೆ.

Last Updated : Jun 25, 2020, 3:12 PM IST

ABOUT THE AUTHOR

...view details