ಕರ್ನಾಟಕ

karnataka

ETV Bharat / bharat

ಡಿ.22ಕ್ಕೆ ಸಿಬಿಎಸ್​ಇ ಬೋರ್ಡ್​ ಪರೀಕ್ಷೆಗಳ ವೇಳಾಪಟ್ಟಿ ನಿರೀಕ್ಷೆ - ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ

ಸಿಬಿಎಸ್​ಇ ಪರೀಕ್ಷೆಗಳ ಬಗ್ಗೆ ಈಗಾಗಲೇ ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಗೊಂದಲ ಏರ್ಪಟ್ಟಿದ್ದು, ಮಂಗಳವಾರ ಇವೆಲ್ಲಕ್ಕೂ ತೆರೆಬೀಳುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

CBSE
ಸಿಬಿಎಸ್​ಇ

By

Published : Dec 20, 2020, 8:58 PM IST

ನವದೆಹಲಿ:ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್​ಇ)ಮುಂದಿನ ವರ್ಷದಲ್ಲಿ ನಡೆಯಲಿರುವ 10 ಮತ್ತು 12ನೇ ತರಗತಿಗಳ ಪರೀಕ್ಷಾ ವೇಳಾಪಟ್ಟಿಯನ್ನು ಮಂಗಳವಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪೇಪರ್ ಮತ್ತು ಪೆನ್ ಮೋಡ್​ನಲ್ಲಿ ಪರೀಕ್ಷೆ ಇರಲಿದ್ದು, ಮಂಗಳವಾರ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಶಿಕ್ಷಕರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದು, ಪರೀಕ್ಷಾ ವೇಳಾಪಟ್ಟಿ ಬಗ್ಗೆ ಮಹತ್ವದ ಮಾಹಿತಿ ನೀಡುವ ಸಾಧ್ಯತೆ ದಟ್ಟವಾಗಿದೆ.

ಓದಿ:ಸಿಬಿಎಸ್​ಇ ಪರೀಕ್ಷೆ - 2021: ಖಾಸಗಿ ವಿದ್ಯಾರ್ಥಿಗಳಿಗೆ ಅರ್ಜಿ ಬಿಡುಗಡೆ

ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಪರೀಕ್ಷೆಗಳನ್ನು ನಡೆಸುವ ವಿಚಾರದಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಮೂರು ರೀತಿಯ ಸಂವಾದವನ್ನು ರಮೇಶ್ ಪೋಖ್ರಿಯಾಲ್ ನಡೆಸಲಿದ್ದಾರೆ. ಮೂರು ದಿನಗಳ ಕಾಲ ವೆಬಿನಾರ್ ಮೂಲಕ ಸಂವಾದ ನಡೆಸಲಿದ್ದು, ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸುವ ಪ್ರಸ್ತಾಪವಿಲ್ಲ ಎಂದು ಸಿಬಿಎಸ್‌ಇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬೋರ್ಡ್​ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಲ್ಲಿ ಭಾರಿ ಗೊಂದಲ ಏರ್ಪಟ್ಟಿತ್ತು. ಈವರೆಗೆ ಆನ್​ಲೈನ್​ನಲ್ಲೇ ಪಾಠ ಪ್ರವಚನಗಳು ನಡೆಯುತ್ತಿದ್ದವು. ಕೆಲವು ದಿನಗಳ ಹಿಂದೆ ಮಾತನಾಡಿದ್ದ ಕೇಂದ್ರ ಶಿಕ್ಷಣ ಸಚಿವರು ಕೊರೊನಾ ಕಾರಣದಿಂದಾಗಿ ಶಿಕ್ಷಣ ನೀಡುವುದು ಸವಾಲಾಗಿದ್ದು, ಕಾಲೇಜುಗಳಲ್ಲಿ ಈ ಆನ್​ಲೈನ್ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಮತ್ತಷ್ಟು ಸವಾಲು ಎಂದಿದ್ದರು.

ABOUT THE AUTHOR

...view details