ಅಲೀಗಢ (ಉತ್ತರ ಪ್ರದೇಶ) : ಹತ್ರಾಸ್ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಪಾಲಿಗ್ರಾಫ್ ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಾಗಿ ಗುಜರಾತ್ನ ಗಾಂಧಿ ನಗರಕ್ಕೆ ಕೇಂದ್ರ ತನಿಖಾ ದಳ (ಸಿಬಿಐ) ತಂಡ ಕರೆದೊಯ್ದಿದೆ ಎಂದು ಅಲೀಗಢ ಜೈಲು ಅಧೀಕ್ಷಕ ತಿಳಿಸಿದ್ದಾರೆ.
ಹತ್ರಾಸ್ ಅತ್ಯಾಚಾರ ಆರೋಪಿಗಳನ್ನು ಪಾಲಿಗ್ರಾಫ್, ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಕರೆದೊಯ್ದ ಸಿಬಿಐ - ಹತ್ರಾಸ್ ಅತ್ಯಾಚಾರ ಆರೋಪಿಗಳಿಗೆ ಪಾಲಿಗ್ರಾಫ್ ಪರೀಕ್ಷೆ
ಹತ್ರಾಸ್ ಅತ್ಯಾಚಾರ ಆರೋಪಿಗಳನ್ನು ಪಾಲಿಗ್ರಾಫ್ ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಾಗಿ ಸಿಬಿಐ ತಂಡ ಗುಜರಾತ್ಗೆ ಕರೆದೊಯ್ದಿದೆ.
ಹತ್ರಾಸ್ ಅತ್ಯಾಚಾರ ಆರೋಪಿಗಳಿಗೆ ಪಾಲಿಗ್ರಾಫ್ ಪರೀಕ್ಷೆ
ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಅಲಹಾಬಾದ್ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಈ ಹಿಂದೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.
ಸೆ. 14 ರಂದು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 19 ವರ್ಷದ ಯುವತಿ, ಸೆ.29 ರಂದು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಕುಟುಂಬದ ವಿರೋಧ ನಡುವೆಯೂ ಯುವತಿಯ ಮೃತ ದೇಹದ ಅಂತ್ಯಕ್ರಿಯೆಯನ್ನು ಉತ್ತರ ಪ್ರದೇಶ ಪೊಲೀಸರು ರಾತ್ರೋ ರಾತ್ರಿ ಮಾಡಿದ್ದರು.