ಹೈದರಾಬಾದ್:ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಹೈದರಾಬಾದ್ ಸಿಬಿಐ ಕೋರ್ಟ್ನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ಸ್ಥಳಾಂತರಿಸುವಂತೆ ಸಿಬಿಐ ಪರ ವಕೀಲರು ಹೈದರಾಬಾದ್ನ ಸಿಬಿಐ ಕೋರ್ಟ್ಗೆ ಮನವಿ ಮಾಡಿದ್ದಾರೆ.
ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣ: ವಿಶಾಖಪಟ್ಟಣಕ್ಕೆ ವರ್ಗಾಯಿಸುವಂತೆ ಸಿಬಿಐ ವಕೀಲರ ಮನವಿ - ಗಾಲಿ ಜನಾರ್ದನ ರೆಡ್ಡಿ
2011ರಲ್ಲಿ ಓಬಳಾಪುರಂ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಆಗ ಅಖಂಡ ಆಂಧ್ರಪ್ರದೇಶ ರಾಜ್ಯವಿತ್ತು. ಪ್ರಕರಣ ದಾಖಲಾದಾಗಿನಿಂದಲೂ ಈ ಪ್ರಕರಣದ ವಿಚಾರಣೆ ಹೈದರಾಬಾದ್ನ ವಿಶೇಷ ಸಿಬಿಐ ಕೋರ್ಟ್ನಲ್ಲಿ ನಡೆಯುತ್ತಿದೆ. ಸದ್ಯ ಈ ಪ್ರಕರಣವನ್ನು ಹೈದರಾಬಾದ್ ಸಿಬಿಐ ಕೋರ್ಟ್ನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ಸ್ಥಳಾಂತರಿಸುವಂತೆ ಸಿಬಿಐ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದ್ದಾರೆ.
ಓಬಳಾಪುರಂ ಗಣಿಗಾರಿಕಾ ಪ್ರದೇಶವು ಆಂಧ್ರಪ್ರದೇಶ ಹಾಗೂ ಕರ್ನಾಟಕದ ಗಡಿಭಾಗದಲ್ಲಿದೆ. 2011ರಲ್ಲಿ ಓಬಳಾಪುರಂ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ಅಖಂಡ ಆಂಧ್ರಪ್ರದೇಶ ರಾಜ್ಯವಿತ್ತು. ನಂತರದ ದಿನಗಳಲ್ಲಿ ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯ ವಿಂಗಡಣೆಯಾಗಿದೆ. ಪ್ರಕರಣ ದಾಖಲಾದ ನಂತರ 2011ರ ಸೆಪ್ಟಂಬರ್ 5ರಂದು ಸಿಬಿಐ, ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿತ್ತು. ಆಗಿನಿಂದಲೂ ಈ ಪ್ರಕರಣದ ವಿಚಾರಣೆ ಹೈದರಾಬಾದ್ನ ವಿಶೇಷ ಸಿಬಿಐ ಕೋರ್ಟ್ನಲ್ಲಿ ನಡೆಯುತ್ತಿದೆ.
ಸದ್ಯ ಸಿಬಿಐ ಪರ ವಕೀಲರು ಪ್ರಕರಣವನ್ನು ಆಂಧ್ರಪ್ರದೇಶಕ್ಕೆ ವರ್ಗಾವಣೆ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಆರೋಪಿಗಳ ಪರ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.