ಕರ್ನಾಟಕ

karnataka

ETV Bharat / bharat

1,400 ಕೋಟಿ ರೂ. ವಂಚನೆ: ಐಸ್​​ ಕ್ರೀಮ್​​​​​​​​​​​​ ಕಂಪನಿ ಕ್ವಾಲಿಟಿ ಲಿಮಿಟೆಡ್​​ ವಿರುದ್ಧ ಸಿಬಿಐ ಪ್ರಕರಣ - ಐಸ್​ ಕ್ರೀಮ್​ ಕಂಪನಿ

ಬ್ಯಾಂಕ್​ ಆಫ್​ ಇಂಡಿಯಾ ನೇತೃತ್ವದ ವಿವಿಧ ಬ್ಯಾಂಕ್​ಗಳಿಗೆ ವಂಚನೆ ಮಾಡಿರುವ ಆರೋಪದ ಮೇಲೆ ಸಿಬಿಐ ಎಂಟು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ.

Kwality Ltd
Kwality Ltd

By

Published : Sep 21, 2020, 9:44 PM IST

ನವದೆಹಲಿ: ಬರೋಬ್ಬರಿ 1,400 ಕೋಟಿ ರೂ. ಬ್ಯಾಂಕ್​ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರತಿಷ್ಠಿತ ಐಸ್​ ಕ್ರೀಮ್​ ಕಂಪನಿ ವಿರುದ್ಧ ಸಿಬಿಐ ದೂರು ದಾಖಲು ಮಾಡಿದೆ.

ಬ್ಯಾಂಕ್​ ಆಫ್​ ಇಂಡಿಯಾ ನೇತೃತ್ವದ ವಿವಿಧ ಬ್ಯಾಂಕ್​ಗಳಿಗೆ ವಂಚನೆ ಮಾಡಿರುವ ಆರೋಪದ ಮೇಲೆ ಸಿಬಿಐ ಎಂಟು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಪ್ರಮುಖವಾಗಿ ನವದೆಹಲಿ, ಬುಲಂದ್​ಶಹರ್​, ಶಹರನ್​ಪುರ್​, ಅಜ್ಮೇರ್​ ಮತ್ತು ಪಲ್ವಾಲ್​ ಸೇರಿದಂತೆ ಐಸ್​ಕ್ರೀಮ್​ ಕಂಪನಿಗೆ ಸೇರಿದ ಎಂಟು ಸ್ಥಳಗಳಲ್ಲಿ ಶೋಧ ಕಾರ್ಯಾ ನಡೆಸಿದೆ.

ಇದಕ್ಕೆ ಸಂಬಂಧಿಸಿದಂತೆ ಸಿಬಿಐ ದೂರು ದಾಖಲು ಮಾಡಿಕೊಂಡಿದ್ದು, ಕಂಪನಿ ನಿರ್ದೇಶನರಾಗಿರುವ ಸಂಜಯ್​ ಧಿಂಗ್ರ, ಸಿದ್ಧಂತ್​ ಗುಪ್ತಾ, ಅರುಣ್​ ಶ್ರೀವಾತ್ಸವ್​ ಹೆಸರು ಉಲ್ಲೇಖಗೊಂಡಿದೆ.

ತೆರಿಗೆ ಉಳಿಸಿಕೊಳ್ಳುವ ಉದ್ದೇಶದಿಂದ ಬ್ಯಾಂಕ್​ ಫಂಡ್​ಗಳನ್ನ ಬೇರೆಡೆ ತಿರುಗಿಸಿರುವುದು, ಅಕ್ರಮ ಹಣ ವರ್ಗಾವಣೆ ಹಾಗೂ ನಕಲಿ ದಾಖಲೆ ಹಾಗೂ ರಶೀದಿ ವಿಚಾರದಲ್ಲಿ ಮೋಸ ಮಾಡಿರುವುದು ಕಂಡು ಬಂದಿದೆ. ಪ್ರಮುಖವಾಗಿ ಕೆನರಾ ಬ್ಯಾಂಕ್​, ಬ್ಯಾಂಕ್​ ಆಫ್​ ಬರೋಡಾ, ಆಂಧ್ರ ಬ್ಯಾಂಕ್​ ,ಕಾರ್ಪೋರೇಷನ್​ ಬ್ಯಾಂಕ್​,ಐಡಿಬಿಐ, ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾ, ಧನಲಕ್ಷ್ಮೀ ಬ್ಯಾಂಕ್​​, ಸಿಂಡಿಕೇಟ್​ ಬ್ಯಾಂಕ್​​ ಸೇರಿವೆ.

ABOUT THE AUTHOR

...view details