ಕರ್ನಾಟಕ

karnataka

ETV Bharat / bharat

ಯೆಸ್​ ಬ್ಯಾಂಕ್​​ ದಿವಾಳಿ ಪ್ರಕರಣ: ಕಪೂರ್, ಡಿಹೆಚ್ಎಫ್ಎಲ್, ಡಿಒಐಟಿ ಅರ್ಬನ್ ವೆಂಚರ್ಸ್ ವಿರುದ್ಧ ಎಫ್ಐಆರ್ - ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್

ಕ್ರಿಮಿನಲ್ ಪಿತೂರಿ, ಮೋಸ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್, ಡಿಹೆಚ್ಎಫ್ಎಲ್ ಮತ್ತು ಡಿಒಐಟಿ ಅರ್ಬನ್ ವೆಂಚರ್ಸ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.

CBI registers FIR  against  Rana Kapoor
ರಾಣಾ ಕಪೂರ್ ವಿರುದ್ದ ಎಫ್ಐಆರ್

By

Published : Mar 9, 2020, 8:38 AM IST

ನವದೆಹಲಿ: ಕ್ರಿಮಿನಲ್ ಪಿತೂರಿ, ಮೋಸ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್, ಡಿಹೆಚ್ಎಫ್ಎಲ್ ಮತ್ತು ಡಿಒಐಟಿ ಅರ್ಬನ್ ವೆಂಚರ್ಸ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ರಾಣಾ ಕಪೂರ್ ಜಾರಿ ನಿರ್ದೇಶನಾಲಯ (ಇಡಿ) ವಶದಲ್ಲಿದ್ದು, ಮುಂಬೈನಲ್ಲಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಕಪೂರ್ ಕುಟುಂಬದೊಂದಿಗೆ ಸಂಪರ್ಕ ಹೊಂದಿರುವ ಡೂಇಟ್‌ ಅರ್ಬನ್‌ ವೆಂಚರ್ಸ್‌ ಕಂಪನಿಯ ಸಹಭಾಗಿತ್ವದಲ್ಲಿರುವ ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ಗೆ 600 ಕೋಟಿ ರೂ. ಸಾಲವನ್ನು ನೀಡಲಾಗಿದೆ. ಅದಲ್ಲದೇ ಡಿಎಚ್‌ಎಫ್‌ಎಲ್‌ಗೆ 3000 ಕೋಟಿ ರೂ. ಸಾಲ ನೀಡಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿರುವ ಇಡಿ ಇದೀಗ ಎಫ್​ಐಆರ್ ದಾಖಲಿಸಿ ವಿಚಾರಣೆ ಆರಂಭಿಸಿದೆ.

ABOUT THE AUTHOR

...view details