ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಡಿಕೆ ಶಿವಕುಮಾರ್ ಮನೆಯ ಮೇಲೆ ನಡೆದ ದಾಳಿಯಲ್ಲಿ 57 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ದೆಹಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿನ ಅವರ ನಿವಾಸದ ಮೇಲೆ ಬೆಳಗ್ಗೆ 6:30ಕ್ಕೆ ಸಿಬಿಐ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದರು.
14 ಸ್ಥಳಗಳಲ್ಲಿ ಶೋಧ, 57 ಲಕ್ಷ ನಗದು ವಶ: ಡಿಕೆಶಿ ವಿರುದ್ಧ ದೂರು ದಾಖಲಿಸಿಕೊಂಡ ಸಿಬಿಐ - ಡಿಕೆಶಿ ಮನೆ ಮೇಲೆ ದಾಳಿ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಾಲಿಗೆ ಇಂದು ಶಾಕಿಂಗ್ ದಿನವಾಗಿದ್ದು, ಬೆಳ್ಳಂ - ಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಏಕಕಾಲಕ್ಕೆ ದೇಶದ ವಿವಿಧ ರಾಜ್ಯದ 14 ಕಡೆ ದಾಳಿ ನಡೆಸಿದ್ದಾರೆ.
ವಿಚಾರಣೆ ಆಧಾರದ ಮೇಲೆ ಡಿಕೆಶಿ ಹಾಗೂ ಅವರ ಕುಟುಂಬದವರ ಮೇಲೆ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮಾರ್ಚ್ನಲ್ಲಿ ನಡೆದ ಐಟಿ ದಾಳಿಯ ತನಿಖೆ ಆಧಾರದ ಮೇಲೆ 74.93 ಕೋಟಿ ಅಕ್ರಮ ಆಸ್ತಿ ಸಂಪಾದನೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಡಿಕೆಶಿ ಹಾಗೂ ಅವರ ಕುಟುಂಬದವರ ಮೇಲೆ ಸಿಬಿಐ ದಾಳಿ ನಡೆಸಿ ತಪಾಸಣೆ ನಡೆಸಿತು.
ಏಕಕಾಲಕ್ಕೆ 14 ಸ್ಥಳಗಳಲ್ಲಿ ದಾಳಿ ಮಾಡಿ ಮಹತ್ವದ ದಾಖಲೆಗಳನ್ನ ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಸುಮಾರು 57 ಲಕ್ಷ ರೂ ವಶ ಪಡಿಸಿಕೊಂಡಿರುವುದಾಗಿ ಅಧಿಕೃತವಾಗಿ ಹೇಳಿದೆ. ಈ ಹಿಂದೆ ಜಾರಿ ನಿರ್ದೇಶನಾಲಯ 58 ವರ್ಷದ ಡಿಕೆ ಶಿವಕುಮಾರ್ ಅವರನ್ನ ಬಂಧನ ಮಾಡಿತ್ತು.