ನವದೆಹಲಿ:ಸಿಬಿಐನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನ ಅವರ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ಡಿಐಜಿತರುಣ್ ಗೌಬಾ ಅವರನ್ನು ಅವರ ಮೂಲ ಸ್ಟೇಟ್ ಕೇಡರ್ಗೆ ವಾಪಸ್ ಕಳುಹಿಸಿ ಕ್ಯಾಬಿನೆಟ್ (ಎಸಿಸಿ) ನೇಮಕಾತಿ ಸಮಿತಿಯು ಆದೇಶ ನೀಡಿದೆ.
ಆಸ್ತಾನ ಪ್ರಕರಣ ವಿಚಾರಣೆ ನಡೆಸುತ್ತಿದ್ದ ಅಧಿಕಾರಿ ಎತ್ತಂಗಡಿ.. ಸ್ಟೇಟ್ ಕೇಡರ್ಗೆ ವರ್ಗಾವಣೆ - undefined
ಸಿಬಿಐನ ವಿಶೇಷ ನಿರ್ದೇಶಕರಾಗಿದ್ದ ರಾಕೇಶ್ ಆಸ್ತಾನ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ಡಿಐಜಿ ತರುಣ್ ಗೌಬಾ ಅವರನ್ನ ಅವರ ಮೂಲ ಸ್ಟೇಟ್ ಕೇಡರ್ಗೆ ವರ್ಗಾವಣೆ ಮಾಡೊ ಎಸಿಸಿ ಆದೇಶ ಹೊರಡಿಸಿದೆ.
2019 ರ ಅಕ್ಟೋಬರ್ನಲ್ಲಿ ಗೌಬಾ ಅವರ ಸೇವಾವಧಿ ಕೊನೆಗೊಳ್ಳಲಿದ್ದು, ಆಗಸ್ಟ್ನಲ್ಲಿ ಅಮೆರಿಕದಲ್ಲಿ ಪ್ರಾರಂಭವಾಗುವ ಪ್ರತಿಷ್ಠಿತ ಫುಲ್ಬ್ರೈಟ್ ವಿದ್ಯಾರ್ಥಿ ವೇತನಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ತರುಣ್ ಗೌಬಾ ಅವರು ಅಧಿಕಾರಾವಧಿಯ ನಂತರ ಸಿಬಿಐನಲ್ಲಿ ಉಳಿಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನ ಈಗಲೇ ಮಾತೃ ಸ್ಟೇಟ್ ಕೇಡರ್ ಗೆ ವಾಪಸ್ ಕಳುಹಿಸಿ ಆದೇಶ ಹೊರಡಿಸಿದೆ.
ಅವರ ಕೋರಿಕೆಯ ಮೇರೆಗೆ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಇದೇ ವೇಳೆ ಸ್ಪಷ್ಟನೆ ನೀಡಿದೆ. ಅಲ್ಲಿಂದಲೇ ಅವರು ತಮ್ಮ ವಿದ್ಯಾರ್ಥಿ ವೇತನವನ್ನು ಪಡೆಯಬಹುದು ಎಂದು, ಸಿಬಿಐನ ಮುಖ್ಯ ಮಾಹಿತಿ ಅಧಿಕಾರಿ ನಿತಿನ್ ವಾಕಂಕರ್ ತಿಳಿಸಿದರು.