ಲಖನೌ:ಇಂದಿನಿಂದ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಮತ್ತೆ ಆರಂಭವಾಗಲಿದ್ದು, ಬಿಜೆಪಿ ಹಿರಿಯ ನಾಯಕರು ಸೇರಿ ಒಟ್ಟು 32 ಆರೋಪಿಗಳ ಹೇಳಿಕೆಗಳನ್ನು ಲಖನೌದ ಸಿಬಿಐ ವಿಶೇಷ ನ್ಯಾಯಾಲಯ ರೆಕಾರ್ಡ್ ಮಾಡಲಿದೆ.
ಬಾಬರಿ ಮಸೀದಿ ಧ್ವಂಸ ಕೇಸ್: ಆರೋಪಿಗಳ ಹೇಳಿಕೆ ರೆಕಾರ್ಡ್ ಮಾಡಲು ಸಿಬಿಐ ಕೋರ್ಟ್ ಸಜ್ಜು - ಬಾಬರಿ ಮಸೀದಿ
1992 ಡಿಸೆಂಬರ್ 6 ರಂದು ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಮತ್ತೆ ಇಂದಿನಿಂದ ಆರಂಭವಾಗಲಿದೆ.
ಬಾಬರಿ ಮಸೀದಿ
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ಬಿಜೆಪಿ ಹಿರಿಯ ನಾಯಕರಾದ ಮುರಳಿ ಮನೋಹರ ಜೋಶಿ, ಉಮಾ ಭಾರತಿ, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್, ರಾಮ್ ವಿಲಾಸ್ ವೇದಾಂತಿ ಸೇರಿ 32 ಮಂದಿ 1992 ಡಿಸೆಂಬರ್ 6 ರಂದು ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪ ಹೊತ್ತಿದ್ದಾರೆ.
ಲಖನೌ ಸಿಬಿಐ ವಿಶೇಷ ನ್ಯಾಯಾಯಲದ ನ್ಯಾಯಮೂರ್ತಿ ಎಸ್.ಕೆ.ಯಾದವ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಐಪಿಸಿ ಸೆಕ್ಷನ್ 313ರ ಅಡಿ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.