ಅಲೀಗಢ (ಉತ್ತರ ಪ್ರದೇಶ): ಇಡೀ ದೇಶವೇ ಬೆಚ್ಚಿ ಬಿದ್ದ ಹಥ್ರಾಸ್ ಘಟನೆಗೆ ಸಂಬಂಧಿಸಿದ ನಾಲ್ವರು ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್ಶೀಟ್ ರೆಡಿ ಮಾಡಿದೆ.
ಕಳೆದ ತಿಂಗಳು ನವೆಂಬರ್ನಲ್ಲಿ ಹತ್ರಾಸ್ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಪಾಲಿಗ್ರಾಫ್ ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಾಗಿ ಕೇಂದ್ರ ತನಿಖಾ ದಳ (ಸಿಬಿಐ) ತಂಡ ಗುಜರಾತ್ನ ಗಾಂಧಿ ನಗರಕ್ಕೆ ಕರೆದೊಯ್ದಿತ್ತು. ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಅಲಹಾಬಾದ್ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಈ ಹಿಂದೆ ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು. ಈಗ ಪ್ರಕರಣದ ಆರೋಪಿಗಳಾದ ಸಂದೀಪ್, ಲವಕುಶ, ರವಿ ಮತ್ತು ರಾಮು ವಿರುದ್ಧ ಸಿಬಿಐ ಚಾರ್ಜ್ಶೀಟ್ ತಯಾರಿಸಿದೆ.