ಅಮರಾವತಿ(ಆಂಧ್ರಪ್ರದೇಶ): ವಿಶಾಖಪಟ್ಟಣದ ವೈದ್ಯ ಸುಧಾಕರ್ ಪ್ರಕರಣದ ವಿಚಾರಣೆಯನ್ನು ಮುಂದುವರೆಸಿರುವ ಸಿಬಿಐ ಕೋರ್ಟ್, ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಸಿಬಿಐ ವೆಬ್‌ಸೈಟ್‌ನಲ್ಲಿ ಎಫ್‌ಐಆರ್ ಪ್ರತಿ ಸಹ ಲಭ್ಯವಿದೆ.
ಡಾ. ಸುಧಾಕರ್ ಪ್ರಕರಣ: ಎಫ್ಐಆರ್ ದಾಖಲಿಸಿದ ಸಿಬಿಐ
ವಿಶಾಖಪಟ್ಟಣದ ವೈದ್ಯ ಸುಧಾಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ನಗರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಲಾಟೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಡಾ.ಸುಧಾಕರ್ ಅವರನ್ನು ಪೊಲೀಸರು ಬಂಧಿಸಿದ್ದರು. ಬಂಧನ ವೇಳೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಈ ಸಂಬಂಧ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು.
ಡಾ.ಸುಧಾಕರ್ ಪ್ರಕರಣ; ಸಿಬಿಐನಿಂದ ಎಫ್ಐಆರ್ ದಾಖಲು
ಕಾನ್ಸ್ಟೇಬಲ್ ಬೆಲಗಲ ವೆಂಕಟರಮಣ ದೂರಿನ ಆಧಾರದ ಮೇಲೆ ಡಾ ಸುಧಾಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೀದಿ ಬದಿಯ ಜನರು ಆತಂಕಗೊಳ್ಳುವ ರೀತಿಯಲ್ಲಿ ಸುಧಾಕರ್ ವರ್ತಿಸಿದ್ದಾರೆ ಎಂಬ ಅಂಶದ ಆಧಾರ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ.
ಮೇ 16 ರಂದು ಸುಧಾಕರ್ ವಿರುದ್ಧ ಪಟ್ಟಣ ಪೊಲೀಸರು 353, 427, 506 ಸೆಕ್ಷನ್‌ಗಳಡಿ ಕೇಸ್ ದಾಖಲಿಸಿಕೊಂಡಿದ್ದರು. ಅಂದಿನ ಎಫ್ಐಆರ್ ಆಧಾರವಾಗಿಟ್ಟುಕೊಂಡು ಪ್ರಸ್ತುತ ಪ್ರಕರಣ ದಾಖಲಿಸಿದ್ದು, ಹೈಕೋರ್ಟ್ ಆದೇಶಾನುಸಾರ ತನಿಖೆ ನಡೆಸುತ್ತಿರುವುದಾಗಿ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.