ಕರ್ನಾಟಕ

karnataka

ETV Bharat / bharat

ಗಡಿಯಾಚೆಗೂ ಅಕ್ರಮವಾಗಿ ಗೋಸಾಗಾಟ.. ಪ್ರಕರಣದಲ್ಲಿ ಭಾಗಿಯಾಗಿದ್ದಾರಾ ಅಧಿಕಾರಿಗಳು?

ಗಡಿಯಾಚೆಗೂ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಮಾಸ್ಟರ್ ಮೈಂಡ್ ​​​​ಮೊಹಮ್ಮದ್ ಎನಾಮುಲ್ ಹಕ್ ಎಂಬಾತನನ್ನು ಸಿಬಿಐ ಬಂಧಿಸಿದೆ. ಅಧಿಕಾರಿಗಳು ಸಹ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಸಿಬಿಐ ದಾಖಲಿಸಿರುವ FIRನಲ್ಲಿ ಉಲ್ಲೇಖಿಸಲಾಗಿದೆ.

-case
ಧಿಕಾರಿಗಳು?

By

Published : Nov 6, 2020, 4:24 PM IST

ದೆಹಲಿ:ಅಕ್ರಮ ಗೋಸಾಗಾಟ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಎಷ್ಟೇ ಕ್ರಮ ಕೈಗೊಂಡಿದ್ದರೂ ಗಡಿಯಾಚೆಗೂ ಗೋಸಾಗಾಟ ನಡೆಯುತ್ತಿರೋದು ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಜಾನುವಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್​​​​ ಮೊಹಮ್ಮದ್ ಎನಾಮುಲ್ ಹಕ್ ಎಂಬಾತನನ್ನು ದೆಹಲಿಯಲ್ಲಿ ಸಿಬಿಐ ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಜಾನುವಾರು ವ್ಯಾಪಾರದಲ್ಲಿ ಭಾರತ, ಬಾಂಗ್ಲಾ ಗಡಿಯಲ್ಲಿ ನೇಮಕೊಂಡಿದ್ದ ಅಧಿಕಾರಿಗಳು ಪಾಲ್ಗೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಸಾರ್ವಜನಿಕರ ಹೇಳಿಕೆಗಳನ್ನು ಆಧರಿಸಿ ಅಧಿಕಾರಿಗಳಾದ ಅರನುಲ್, ಎಸ್.​ಕೆ.ಮೊಹಮ್ಮದ್ ಗೋಲಂ ಮುಸ್ತಫಾ ಮತ್ತು ಇತರರ ಮೇಲೆ ಸಿಬಿಐ FIR ದಾಖಲಿಸಿದೆ.

ಪ್ರಕರಣ ದಾಖಲಿಸಿದ ಬಳಿಕ ಸೆಪ್ಟೆಂಬರ್ 23ರಂದು ಸಿಬಿಐ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಛತ್ತಿಸ್​ಗಢ, ಪಂಜಾಬ್​ನ 15 ಸ್ಥಳಗಳಲ್ಲಿ ಶೋಧ ನಡೆಸಿತು. ಸಿಬಿಐ ದಾಖಲಿಸಿರುವ ಎಫ್​ಐಆರ್ ಪ್ರಕಾರ ಅಂತಾರಾಷ್ಟ್ರೀಯ ಗಡಿಯಲ್ಲಿ ಕೆಲಸ ನಿರ್ವಹಿಸುವ BSF ಸಿಬ್ಬಂದಿ ಲಂಚ ಪಡೆದು ಗೋಸಾಗಾಟಕ್ಕೆ ನೆರವಾಗಿದ್ದಾರೆ ಎನ್ನಲಾಗಿದೆ.

ಕಳ್ಳಸಾಗಾಣಿಕೆದಾರರಿಂದ ವಶಪಡಿಸಿಕೊಂಡು ಜಾನುವಾರುಗಳನ್ನು ಗೋ ಸಾಗಾಟಗಾರರಿಗೆ ನೀಡಿ ಹರಾಜು ಹಾಕಿದ ಹಣದಲ್ಲಿ ಶೇಕಡಾ 10ರಷ್ಟನ್ನು ಅಧಿಕಾರಿಗಳು ಪಡೆದುಕೊಳ್ಳುತ್ತಿದ್ದರು ಎಂದು FIRನಲ್ಲಿ ಉಲ್ಲೇಖಿಸಲಾಗಿದೆ.

ಬಿಎಸ್​​ಎಫ್ ಅಧಿಕಾರಿಯೋರ್ವರ ಮಗ ಭುವನ್ ಭಾಸ್ಕರ್ ಎಂಬಾತ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆಂದು ಆರೋಪಿಸಲಾಗಿದೆ.

ABOUT THE AUTHOR

...view details