ಕರ್ನಾಟಕ

karnataka

ETV Bharat / bharat

ಜಾಲತಾಣದಲ್ಲಿ ಆಕ್ಷೇಪಾರ್ಹ ವಸ್ತುಗಳ ಖರೀದಿ-ಮಾರಾಟ : ಇಬ್ಬರನ್ನ ಬಂಧಿಸಿದ ಸಿಬಿಐ - ಸಿಬಿಐ ಸಂಬಂಧಿತ ಸುದ್ದಿ

ವಾಟ್ಸ್​ಆ್ಯಪ್, ಟೆಲಿಗ್ರಾಂ, ಇನ್‌ಸ್ಟಾಗ್ರಾಂ ಮತ್ತು ಇತರ ಸಾಮಾಜಿಕ ಜಾಲತಾಣ‌ಗಳ ಮೂಲಕವೂ ಈ ರೀತಿಯ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು, 2019ರಿಂದ ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ..

CBI
ಕೇಂದ್ರ ತನಿಖಾ ದಳ

By

Published : Jan 10, 2021, 4:13 PM IST

ನವದೆಹಲಿ :ಸಾಮಾಜಿಕ ಜಾಲತಾಣದ ಮೂಲಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಾಮಗ್ರಿಗಳನ್ನು ಮಾರಾಟ ಮತ್ತು ಖರೀದಿ ಮಾಡುತ್ತಿದ್ದ ಇಬ್ಬರನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ.

ಇಬ್ಬರು ಆರೋಪಿಗಳನ್ನು ಇಲ್ಲಿನ ಸಾಕತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜನವರಿ 22ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಿ ಕೋರ್ಟ್​ ಆದೇಶ ನೀಡಿದೆ.

ಇದನ್ನು ಓದಿ: ರಾಧಿಕಾ ಕುರಿತ ಪ್ರಶ್ನೆಗೆ ‘ಯಾರಪ್ಪ ಅವರೆಲ್ಲ? ಅದ್ಯಾರೋ ನಂಗೊತ್ತಿಲ್ಲ’ ಎಂದ ಹೆಚ್‌.ಡಿ.ಕುಮಾರಸ್ವಾಮಿ!

ಮಕ್ಕಳ ಅಶ್ಲೀಲ ವಸ್ತುಗಳು ಸೇರಿದಂತೆ ಆಕ್ಷೇಪಾರ್ಹ ವಸ್ತುಗಳ ಬಗ್ಗೆ ಇನ್​ಸ್ಟಾಗ್ರಾಂ ಮೂಲಕ ಜಾಹೀರಾತು ನೀಡಿದ್ದರು ಎಂಬ ಆರೋಪ ಇವರ ಮೇಲಿದ್ದು, ಪೋಕ್ಸೊ ಕಾಯ್ದೆ 2012ರ ಸೆಕ್ಷನ್ 14ರ ಅಡಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 67-ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನೊಬ್ಬ ಆರೋಪಿಯು ಅಶ್ಲೀಲ ವಸ್ತುಗಳನ್ನು ಖರೀದಿಸಿದ್ದಾನೆ ಎಂಬ ಆರೋಪದಲ್ಲಿ ಬಂಧಿಸಲಾಗಿದೆ.

ವಾಟ್ಸ್​ಆ್ಯಪ್, ಟೆಲಿಗ್ರಾಂ, ಇನ್‌ಸ್ಟಾಗ್ರಾಂ ಮತ್ತು ಇತರ ಸಾಮಾಜಿಕ ಜಾಲತಾಣ‌ಗಳ ಮೂಲಕವೂ ಈ ರೀತಿಯ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು, 2019ರಿಂದ ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ABOUT THE AUTHOR

...view details