ಕರ್ನಾಟಕ

karnataka

ETV Bharat / bharat

ಇಲ್ಲಿ ಹೆಲ್ಮೆಟ್​ ಧರಿಸದೇ ಸಿಕ್ಕಿಬಿದ್ರೆ ಪೊಲೀಸರಿಂದಲೇ ಸಿಗುತ್ತೆ ಟೀ-ಬಿಸ್ಕೇಟ್: ಯಾಕ್​ ಗೊತ್ತಾ?!

ಹೆಲ್ಮೆಟ್​ ಧರಿಸದೆ, ವಾಹನ ಚಾಲನೆ ಮಾಡಿ ಸಿಕ್ಕಿ ಬೀಳುವ ಮಂದಿಗೆ ಚೆನ್ನೈ ಪೊಲೀಸರು ತಮ್ಮ ಖರ್ಚಿನಲ್ಲಿ ಟೀ, ಜ್ಯೂಸ್​, ಬೆಸ್ಕೇಟ್​ ಕೊಡಿಸಿ, ಒಳ್ಳೆಯ ರೀತಿಯಲ್ಲಿ ಬುದ್ಧಿವಾದ ಹೇಳಲು ನಿರ್ಧರಿಸಿದ್ದಾರೆ.

Chennai police

By

Published : Jul 29, 2019, 5:25 AM IST

ಚೆನ್ನೈ:ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್​ ಧರಿಸಿ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಕ್ಯಾರೇ ಎನ್ನುತ್ತಿಲ್ಲ. ಇದಕ್ಕಾಗಿ ತಮಿಳುನಾಡಿನ ಪೊಲೀಸರು ಹೊಸ ಐಡಿಯಾ ಮಾಡಿದ್ದಾರೆ.

ಹೆಲ್ಮೆಟ್​ ಧರಿಸದೆ, ವಾಹನ ಚಾಲನೆ ಮಾಡಿ ಸಿಕ್ಕಿ ಬೀಳುವ ಮಂದಿಗೆ ಚೆನ್ನೈ ಪೊಲೀಸರು ತಮ್ಮ ಖರ್ಚಿನಲ್ಲೇ ಟೀ, ಜ್ಯೂಸ್​, ಬೆಸ್ಕೇಟ್​ ಕೊಡಿಸಿ, ಒಳ್ಳೆಯ ರೀತಿಯಲ್ಲಿ ಬುದ್ಧಿವಾದ ಹೇಳಲು ಮುಂದಾಗಿದ್ದಾರೆ. ಈ ಮೂಲಕವಾದರೂ ಜನರು ಬುದ್ಧಿ ಕಲಿಯುತ್ತಾರೆ ಎಂಬ ವಿಶ್ವಾಸ ಪೊಲೀಸರದ್ದಾಗಿದೆ.

ವಾಹನ ಚಾಲನೆ ಮಾಡುವವರು ಹಾಗೂ ಹಿಂಬದಿ ಸವಾರರು ಸಹ ಹೆಲ್ಮೆಟ್​ ಧರಿಸಬೇಕೆಂಬ ಕಾನೂನು ಜಾರಿ ಮಾಡಿದರೂ ಜನರು ಮಾತ್ರ ತಮ್ಮ ಹಳೇ ಚಾಳಿ ಮುಂದುವರೆಸಿದ್ದಾರೆ. ಇದರಿಂದ ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವವವರ ಸಂಖ್ಯೆ ಹೆಚ್ಚುತ್ತಲೇ ಇದೆ. ರಸ್ತೆ ಸುರಕ್ಷತಾ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಂತೆ ಮದ್ರಾಸ್​ ಹೈಕೋರ್ಟ್​, ಪೊಲೀಸರ ಮೇಲೆ ಒತ್ತಡ ಹೇರುತ್ತಿದೆ. ಇದರಿಂದ ಏನು ಮಾಡಬೇಕೆಂದು ತೋಚದೆ, ಈ ನಿರ್ಧಾರ ಕೈಗೊಂಡಿದ್ದಾರೆ ಸ್ವತಃ ಪೊಲೀಸರೇ ಹೇಳಿಕೊಂಡಿದ್ದಾರೆ.

ಹೆಲ್ಮೆಟ್​ ಧರಿಸದ ಮಂದಿಯನ್ನು ಕೂರಿಸಿ, ಅವರಿಗೆ ಟೀ, ಜ್ಯೂಸ್​ ನೀಡಿ, ಹೆಲ್ಮೆಟ್​ನ ಪ್ರಯೋಜನೆಗಳ ಬಗ್ಗೆ, ಅದಿಲ್ಲದಿದ್ದರೆ ಆಗುವ ಅನಾಹುತದ ಬಗ್ಗೆ ಮನಮುಟ್ಟುವಂತೆ ತಿಳಿಹೇಳಲು ಪೊಲೀಸರು ಸಜ್ಜಾಗಿದ್ದಾರೆ. ಕೆಲವರು ಈಗಾಗಲೇ ಈ ಕಾರ್ಯದಲ್ಲಿ ತೊಡಗಿದ್ದಾರೆ.

ಕಠಿಣ ಕಾನೂನುಗಳನ್ನೇ ಲೆಕ್ಕಿಸದ ಜನರು, ಚೆನ್ನೈ ಪೊಲೀಸರು ಈ ಮೃಧು ಧೋರಣೆದಿಂದಾದರೂ ಪಾಠ ಕಲಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details