ಕೊಚ್ಚಿ (ಕೇರಳ) : ಈ ತಿಂಗಳ ಆರಂಭದಲ್ಲಿ ನೆಲಸಮಗೊಂಡ ಮರಡು ಫ್ಲ್ಯಾಟ್‌ಗಳ ಕಾಂಕ್ರೀಟ್ ತ್ಯಾಜ್ಯವನ್ನು ನಿಭಾಯಿಸಲು ಅಧಿಕಾರಿಗಳು ವಿಫಲವಾದ ಕಾರಣ ಮರಾಡು ಪುರಸಭೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ಮರಡು ಪ್ಲ್ಯಾಟ್ಗಳ ತ್ಯಾಜ್ಯ ನಿಭಾಯಿಸಲು ವಿಫಲ : ಪುರಸಭೆಯ ವಿರುದ್ಧ ಕೋರ್ಟ್ ಕೈಗೊಂಡ ಕ್ರಮವೇನು? - ಮರಡು ಫ್ಲ್ಯಾಟ್‌ಗಳ ಕಾಂಕ್ರೀಟ್ ತ್ಯಾಜ್ಯ ನಿಭಾಯಿಸಲು ವಿಫಲ
ಈ ತಿಂಗಳ ಆರಂಭದಲ್ಲಿ ನೆಲಸಮಗೊಂಡ ಮರಡು ಫ್ಲ್ಯಾಟ್‌ಗಳ ಕಾಂಕ್ರೀಟ್ ತ್ಯಾಜ್ಯವನ್ನು ನಿಭಾಯಿಸಲು ವಿಫಲವಾದ ಕಾರಣ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು ಮರಡು ಪುರಸಭೆಯ ವಿರುದ್ಧ ಪ್ರಕರಣ ದಾಖಲಿಸಿದೆ. ತ್ಯಾಜ್ಯ ವಿಲೇವಾರಿ ನಿರ್ದೇಶನಗಳನ್ನು ಕಡೆಗಣಿಸಲಾಗಿದೆ ಎಂದು ನ್ಯಾಯಮಂಡಳಿ ತಿಳಿಸಿದೆ.
ಮರಡು ಫ್ಲ್ಯಾಟ್‌ಗಳ ಕಾಂಕ್ರೀಟ್ ತ್ಯಾಜ್ಯ ನಿಭಾಯಿಸಲು ವಿಫಲ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಾಧ್ಯಮ ವರದಿಗಳ ಆಧಾರದ ಮೇಲೆ ಸುಮೊಟು ಪ್ರಕರಣವನ್ನು ದಾಖಲಿಸಿದೆ. ತ್ಯಾಜ್ಯ ವಿಲೇವಾರಿ ನಿರ್ದೇಶನಗಳನ್ನು ನಿರ್ಲಕ್ಷಿಸಲಾಗಿದೆ ಮತ್ತು ತ್ಯಾಜ್ಯವನ್ನು ಎಲ್ಲಿ ಸಂಗ್ರಹಿಸಬೇಕು ಎಂಬುದು ಸ್ಪಷ್ಟವಾಗಿಲ್ಲ ಎಂದು ನ್ಯಾಯಮಂಡಳಿ ತಿಳಿಸಿದೆ. ಧೂಳನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಮಂಡಳಿ ಆರೋಪಿಸಿದೆ.
ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇಲ್ಲಿನ ಕಟ್ಟಡಗಳನ್ನು ಧ್ವಂಸಗೊಳಿಸಲಾಯಿತು. ಈ ಸಂಬಂಧ ನಿರ್ದೇಶನಗಳನ್ನು ಕಳೆದ ವರ್ಷ ಸುಪ್ರೀಂಕೋರ್ಟ್ ಅಂಗೀಕರಿಸಿತ್ತು