ಹಥ್ರಾಸ್: ಕೊರೊನಾ ಸೋಂಕು ತಗುಲಿದ್ರೂ ಸಹ ಶಾಸಕರೊಬ್ಬರು ಹಥ್ರಾಸ್ ಯುವತಿಯ ಕುಟುಂಬಸ್ಥರನ್ನು ಭೇಟಿ ಮಾಡಿದ್ದು, ಈಗ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕೊರೊನಾ ಇದ್ರೂ ಹಥ್ರಾಸ್ ಸಂತ್ರಸ್ತರ ಭೇಟಿ ಮಾಡಿದ ಶಾಸಕನ ವಿರುದ್ಧ ಕೇಸು ದಾಖಲು - ಶಾಸಕ ಕುಲ್ದೀಪ್ ಕುಮಾರ್ ಸುದ್ದಿ
ಕೊರೊನಾ ಇದ್ರೂ ಹಥ್ರಾಸ್ ಸಂತ್ರಸ್ತರನ್ನು ಭೇಟಿ ಮಾಡಿದ ದೆಹಲಿಯ ಆಪ್ ಪಕ್ಷದ ಶಾಸಕನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೊರೊನಾ ಇದ್ರೂ ಹಥ್ರಾಸ್ ಸಂತ್ರಸ್ತರನ್ನ ಭೇಟಿ ಮಾಡಿದ ಶಾಸಕನ ವಿರುದ್ಧ ದೂರು ದಾಖಲು
ಸೆಪ್ಟಂಬರ್ 29ಕ್ಕೆ ಕೊರೊನಾ ಸೋಂಕು ದೃಢಪಟ್ಟಿರುವ ಬಗ್ಗೆ ದೆಹಲಿಯ ಆಪ್ ಶಾಸಕ ಕುಲ್ದೀಪ್ ಕುಮಾರ್ ತಿಳಿಸಿದ್ದರು. ಇದಾದ ಬಳಿಕ ಅಂದ್ರೆ ಅಕ್ಟೋಬರ್ 4 ರಂದು ಹಥ್ರಾಸ್ ಯುವತಿಯ ಕುಟುಂಬಸ್ಥರನ್ನು ಭೇಟಿ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಯಬಿಟ್ಟಿದ್ದರು.
ಕೊರೊನಾ ಸೋಂಕು ತಗುಲಿದ್ರೂ ಸಹ ಶಾಸಕ ಕುಲ್ದೀಪ್ ಕುಮಾರ್ ಸಾಂಕ್ರಾಮಿಕ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ಮೇಲೆ ಈ ಕಾಯ್ದೆಯ ಪ್ರಕಾರ ದೂರು ದಾಖಲಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹಥ್ರಾಸ್ ಎಸ್ಪಿ ತಿಳಿಸಿದ್ದಾರೆ.