ನವದೆಹಲಿ: ಉತ್ತರ ಪ್ರದೇಶ ಹಥ್ರಾಸ್ ಸಂತ್ರಸ್ತೆ ಕುಟುಂಬವನ್ನ ಭೇಟಿ ಮಾಡಲು ಯತ್ನಿಸಿದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ 200 ಜನರ ವಿರುದ್ಧ ಗೌತಮ್ ಬುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಹುಲ್, ಪ್ರಿಯಾಂಕಾ ಸೇರಿ 200 ಜನರ ವಿರುದ್ಧ ಕೇಸ್ - ಕಾಂಗ್ರೆಸ್ ನಾಯಕರ ವಿರುದ್ಧ ಕೇಸ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ 200 ಜನರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

ರಾಹುಲ್, ಪ್ರಿಯಾಂಕಾ ಸೇರಿ 200 ಜನರ ವಿರುದ್ಧ ಕೇಸ್
ಸೆಕ್ಷನ್ 188, 269 ಮತ್ತು 270 ಅಡಿ ಹಾಗೂ ಎಪಿಡೆಮಿಕ್ ಆ್ಯಕ್ಟ್ ಅಡಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು 200 ಜನರ ವಿರುದ್ಧ ದೂರು ದಾಖಲಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶ ಹಥ್ರಾಸ್ ಸಂತ್ರಸ್ತೆ ಕುಟುಂಬವನ್ನ ಭೇಟಿ ಮಾಡಲು ತೆರಳುತ್ತಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದರು.