ಕರ್ನಾಟಕ

karnataka

ETV Bharat / bharat

ಸಹಚರರಿಂದಲೇ ಯುವಕನ ಹತ್ಯೆ: ಪೊದೆಯಲ್ಲಿ ಶವ ಎಸೆದು ಪರಾರಿ - crime news

ಯುವಕನೋರ್ವನನ್ನು ಅಮಾನುಷವಾಗಿ ಥಳಿಸಿ, ಶವವನ್ನು ರಸ್ತೆಬದಿಯ ಪೊದೆಯಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದಾರೆ. ಮೃತ ದೇಹ ನೋಡಿದ ಗ್ರಾಮಸ್ಥರು ಗಾಬರಿಯಾಗಿದ್ದಾರೆ.

case-of-murder-of-a-youth-in-dholpur-one-arrested
ಸಹಚರರಿಂದ ಯುವಕನ ಹತ್ಯೆ

By

Published : Jul 29, 2020, 6:54 AM IST

ಧೌಲ್ಪುರ್(ರಾಜಸ್ಥಾನ) : 27 ವರ್ಷದ ಯುವಕನನ್ನ ಆತನ ಸಹಚರರೇ ಅಮಾನುಷವಾಗಿ ಥಳಿಸಿ ಕೊಂದಿರುವ ಘಟನೆ ರಾಜಸ್ಥಾನದ ಕೌಲಾರಿ ಪೊಲೀಸ್ ಠಾಣೆ ವ್ಯಾಪ್ತಿಯ ನಯಾಪುರ ಗ್ರಾಮದಲ್ಲಿ ನಡೆದಿದೆ.

ಅಮಾನುಷವಾಗಿ ಥಳಿಸಿ ಯುವಕನ ಶವವನ್ನು ರಸ್ತೆಬದಿಯ ಪೊದೆಯಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದಾರೆ. ಪೊದೆಗಳಲ್ಲಿ ಮೃತ ದೇಹ ನೋಡಿದ ಗ್ರಾಮಸ್ಥರು ಗಾಬರಿಯಾಗಿದ್ದಾರೆ.

ಸಹಚರರಿಂದ ಯುವಕನ ಹತ್ಯೆ

ಈ ಸುದ್ದಿ ಕೇಳಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ನಿನ್ನೆ ಸಂಜೆ, ಯುವಕ ತರಕಾರಿ ಮಾರಾಟ ಮಾಡಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಆತನ ಸಹಚರರು ಹಲ್ಲೆ ಮಾಡಿ ಕೊಂದು ಹಾಕಿದ್ದಾರೆ. ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಕೆಲವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ABOUT THE AUTHOR

...view details