ಕರ್ನಾಟಕ

karnataka

ETV Bharat / bharat

ಉಪಗ್ರಹಗಳಿಗೆ ಕಂಟಕವಾಗಬಲ್ಲದು ಸ್ಪೇಸ್ ಜಂಕ್! - sunlight and satellite

ಉಪಗ್ರಹಗಳು ಪ್ರತಿಫಲಿಸುವ ಸೂರ್ಯನ ಬೆಳಕನ್ನು ಟೆಲಿಸ್ಕೋಪ್ ಮೂಲಕ ಪತ್ತೆ ಮಾಡಬಹುದು. ಆದರೆ ಉಪಗ್ರಹಗಳು ಭೂಮಿಯಿಂದ ತೀರಾ ದೂರದಲ್ಲಿರುವುದರಿಂದ ಎಲ್ಲ ವಸ್ತುಗಳು ಕೇವಲ ಒಂದು ಚುಕ್ಕಿಯಾಗಿ ಕಾಣಿಸುತ್ತವೆ. ರಾತ್ರಿ ಕಾಣಿಸುವ ದೂರದ ಚುಕ್ಕಿಯಂತೆ ಇವು ಟೆಲಿಸ್ಕೋಪ್​ನಲ್ಲಿ ಕಂಡು ಬರುತ್ತವೆ. ಈ ಚುಕ್ಕಿಗಳು ಪ್ರತಿಫಲಿಸುವ ಬೆಳಕಿನ ಬದಲಾವಣೆಯನ್ನು ಆಧರಿಸಿ ಆ ವಸ್ತುವಿನ ಸ್ವರೂಪ ಹಾಗೂ ಗಾತ್ರವನ್ನು ಅಂದಾಜಿಸಲಾಗುತ್ತದೆ.

save satellites from a fate of 'space junk'
save satellites from a fate of 'space junk'

By

Published : Jun 18, 2020, 11:28 PM IST

ಆಕಾಶದಲ್ಲಿ ಸುತ್ತುತ್ತಿರುವ ಉಪಗ್ರಹವೊಂದು ಯಾವಾಗ ಭೂಮಿಯಿಂದ ಸಂಪೂರ್ಣ ಸಂಪರ್ಕ ಕಡಿದುಕೊಳ್ಳುತ್ತದೆಯೋ ಆಗ ಅದನ್ನು ಸ್ಪೇಸ್ ಜಂಕ್ (ಆಕಾಶದಲ್ಲಿ ಸುತ್ತುತ್ತಿರುವ ಕಸ) ಎಂದು ಪರಿಗಣಿಸಲಾಗುತ್ತದೆ. ಇದೊಂದು ತ್ಯಾಜ್ಯ ವಸ್ತುವಾಗಿ ಮುಂದಿನ ನೂರಾರು ವರ್ಷ ಅಥವಾ ಬಹುಶಃ ಅದಕ್ಕೂ ಹೆಚ್ಚು ಕಾಲ ಅಲ್ಲಿಯೇ ಸುತ್ತುತ್ತಿರುತ್ತದೆ. ಇಂಥ ಸ್ಪೇಸ್ ಜಂಕ್ ಇತರ ಕಾರ್ಯನಿರ್ವಹಣೆಯಲ್ಲಿರುವ ಸೆಟಲೈಟ್​ಗಳಿಗೆ ತುಂಬಾ ಅಪಾಯಕಾರಿಯಾಗುವ ಸಾಧ್ಯತೆ ಇರುತ್ತದೆ. ಒಂದು ರೂಪಾಯಿ ನಾಣ್ಯ ಹಾಗೂ ಅದಕ್ಕೂ ದೊಡ್ಡದಾದ ಬೃಹತ್ ಗಾತ್ರದವರೆಗಿನ ಸುಮಾರು 1 ಲಕ್ಷ ಸ್ಪೇಸ್ ಜಂಕ್ ತುಕಡಿಗಳು ಭೂಮಿಯ ಸುತ್ತ ಸುತ್ತುತ್ತಿವೆ ಎಂದು ಅಮೆರಿಕೆಯ ಸ್ಟ್ರಾಟೆಜಿಕ್ ಕಮಾಂಡ್ ಡೇಟಾಬೇಸ್ ತಿಳಿಸಿದೆ.

ಆಕಾಶದಲ್ಲಿನ ನಿರ್ವಾತ ವಾತಾವರಣವು ಉಪಗ್ರಹಗಳ ಮೇಲೆ ಒತ್ತಡ ನಿರ್ಮಿಸುತ್ತದೆ. ಭೂಮಿಯ ನೆರಳಿನಲ್ಲಿದ್ದಾಗ ವಿಪರೀತ ಚಳಿ ಹಾಗೂ ಸೂರ್ಯನ ಬಿಸಿಲಿರುವಾಗ ಅತಿ ಹೆಚ್ಚು ಉಷ್ಣಾಂಶವನ್ನು ಈ ಉಪಗ್ರಹಗಳು ತಾಳಿಕೊಳ್ಳಬೇಕಾಗುತ್ತದೆ.

"ಉಪಗ್ರಹ ಭೂಮಿಯ ಮೇಲಿರುವಾಗ ನಮಗೆ ಅದರ ಬಗ್ಗೆ ಎಲ್ಲ ಮಾಹಿತಿ ತಿಳಿದಿರುತ್ತದೆ. ಆದರೆ ಅದನ್ನು ಆಕಾಶಕ್ಕೆ ಹಾರಿ ಬಿಡುವಾಗ ಎಲ್ಲವೂ ಬದಲಾಗುತ್ತದೆ. ಉಪಗ್ರಹ ಮೇಲೇರುವಾಗ ಅದರ ಭಾಗಗಳು ಒಳಗೆ ಮುಚ್ಚಿಕೊಂಡಿರಬೇಕಾಗುತ್ತದೆ ಹಾಗೂ ಒಂದು ಬಾರಿ ಭೂಮಿಯ ವಾತಾವರಣದಿಂದ ದೂರ ಹೋದ ನಂತರ ಆ ಭಾಗಗಳು ಬಿಚ್ಚಿಕೊಳ್ಳಬೇಕಾಗುತ್ತದೆ. ಅದರ ಪ್ಯಾನೆಲ್​ಗಳು ಸೂರ್ಯನತ್ತ ಹಾಗೂ ಆ್ಯಂಟೆನಾ ಭೂಮಿಯತ್ತ ನಿಖರವಾಗಿ ಮುಖ ಮಾಡಿರಬೇಕಾಗುತ್ತದೆ." ಎನ್ನುತ್ತಾರೆ ಕ್ಯಾರೋಲಿನ್ ಫ್ರುಯೆ. ಉಪಗ್ರಹಗಳು ಸೂರ್ಯನ ಬೆಳಕನ್ನು ಪ್ರತಿಫಲಿಸುವ ಆಧಾರದ ಮೇಲೆ ಸ್ಪೇಸ್ ಜಂಕ್ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ ವಿಜ್ಞಾನಿ ಫ್ರುಯೆ.

ಉಪಗ್ರಹಗಳು ಪ್ರತಿಫಲಿಸುವ ಸೂರ್ಯನ ಬೆಳಕನ್ನು ಟೆಲಿಸ್ಕೋಪ್ ಮೂಲಕ ಪತ್ತೆ ಮಾಡಬಹುದು. ಆದರೆ ಉಪಗ್ರಹಗಳು ಭೂಮಿಯಿಂದ ತೀರಾ ದೂರದಲ್ಲಿರುವುದರಿಂದ ಎಲ್ಲ ವಸ್ತುಗಳು ಕೇವಲ ಒಂದು ಚುಕ್ಕಿಯಾಗಿ ಕಾಣಿಸುತ್ತವೆ. ರಾತ್ರಿ ಕಾಣಿಸುವ ದೂರದ ಚುಕ್ಕಿಯಂತೆ ಇವು ಟೆಲಿಸ್ಕೋಪ್​ನಲ್ಲಿ ಕಂಡು ಬರುತ್ತವೆ. ಈ ಚುಕ್ಕಿಗಳು ಪ್ರತಿಫಲಿಸುವ ಬೆಳಕಿನ ಬದಲಾವಣೆಯನ್ನು ಆಧರಿಸಿ ಆ ವಸ್ತುವಿನ ಸ್ವರೂಪ ಹಾಗೂ ಗಾತ್ರವನ್ನು ಅಂದಾಜಿಸಲಾಗುತ್ತದೆ.

"ಈ ವಿಧಾನದಿಂದ ಶೇ 80 ರಷ್ಟು ನಿಖರವಾಗಿ ವಸ್ತುವಿನ ಸ್ವರೂಪವನ್ನು ತಿಳಿಯಬಹುದಾದರೂ ಇದು ತೀರಾ ಸಂಕೀರ್ಣವಾಗಿದೆ. ಹೀಗಾಗಿ ಈ ಮಾಹಿತಿ ಅಷ್ಟೊಂದು ಉಪಯುಕ್ತವಾಗದೆಯೂ ಇರಬಹುದು." ಎನ್ನುತ್ತಾರೆ ಫ್ರುಯೆ.

ಮುಂದಿನ 5 ರಿಂದ 10 ವರ್ಷಗಳಲ್ಲಿ ಸ್ಪೇಸ್ ಜಂಕ್ ಅನ್ನು ನಿಖರವಾಗಿ ಗುರುತಿಸುವ ತಂತ್ರಜ್ಞಾನ ಅಭಿವೃದ್ಧಿಯಾಗಬಹುದು ಎಂದು ಫ್ರುಯೆ ಹೇಳುತ್ತಾರೆ.

ABOUT THE AUTHOR

...view details