ಕರ್ನಾಟಕ

karnataka

ETV Bharat / bharat

ಕೋವಿಡ್​ 19 ಭಯ: ಹಿರಿಯರನ್ನು ಈ ರೀತಿ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ - ಕೊರೊನಾಗೆ ವಯಸ್ಸಾದವರೇ ಬಲಿ

ವಯಸ್ಸಾದವರು ತೋಟದಲ್ಲೋ ಅಥವಾ ಸ್ನೇಹಿತರ ಜೊತೆ ವಾಕ್​ ಮಾಡಲು ಬಯಸುತ್ತಾರೆ. ಆದರೆ ಇಂದಿನ ಪರಿಸ್ಥಿತಿ ಅವರನ್ನು ಮನೆಯಲ್ಲೇ ಇರುವಂತೆ ಮಾಡಿದೆ. ಇದರಿಂದ ಅವರಿಗೆ ತೀವ್ರ ಬೇಸರವನ್ನೂ ಉಂಟುಮಾಡಿದೆ. ಈ ಎಲ್ಲಾ ಕಾರಣದಿಂದಾಗಿ ಅದರಲ್ಲೂ ಕೊರೊನಾ ಮುನ್ನೆಚರಿಕೆ ಹಿನ್ನೆಲೆ ವಯಸ್ಸಾದವರನ್ನು ನೋಡಿಕೊಳ್ಳಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಈ ಕೆಳಗಿನ ಸಲಹೆಗಳನ್ನು ಶಿಫಾರಸು ಮಾಡುತ್ತದೆ.

: ಹಿರಿಯರನ್ನು ಈ ರೀತಿ ನೋಡಿಕೊಳ್ಳೋದು ನಮ್ಮೆಲ್ಲರ ಕರ್ತವ್ಯ
: ಹಿರಿಯರನ್ನು ಈ ರೀತಿ ನೋಡಿಕೊಳ್ಳೋದು ನಮ್ಮೆಲ್ಲರ ಕರ್ತವ್ಯ

By

Published : Apr 5, 2020, 1:20 PM IST

Updated : Apr 5, 2020, 3:24 PM IST

ಹೈದರಾಬಾದ್: ಪ್ರತಿ ಸಾಂಕ್ರಾಮಿಕ ರೋಗಗಳು ತನ್ನದೇ ಆದ ಅಪಾಯವನ್ನು ಹೊಂದಿರುತ್ತವೆ. ಅಂತೆಯೇ ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿರೋ ಕೊರೊನಾ ಕೂಡ. ಈ ಸೋಂಕು ವೃದ್ಧರನ್ನು ಇನ್ನಷ್ಟು ಬಲಹೀನರನ್ನಾಗಿ ಮಾಡಲು ಹೊರಟಿದೆ.

ವಯಸ್ಸಾದ ಜನರು ಅದರಲ್ಲೂ 60 ವರ್ಷ ಮೇಲ್ಪಟ್ಟವರು ರೋಗನಿರೋಧಕ ಶಕ್ತಿಯನ್ನು ಕಡಿಮೆ ಹೊಂದಿರುತ್ತಾರೆ. ಈ ಕಾರಣಕ್ಕಾಗಿ ಯಾವುದೇ ಸಣ್ಣ ಸೋಂಕು ಉಂಟಾದರೂ ಅವರಿಗೆ ಅನಾರೋಗ್ಯ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇನ್ನು ವಯಸ್ಸಾದವರು ತೋಟದಲ್ಲೋ ಅಥವಾ ಸ್ನೇಹಿತರ ಜೊತೆ ವಾಕ್​ ಮಾಡಲು ಬಯಸುತ್ತಾರೆ. ಆದರೆ ಇಂದಿನ ಪರಿಸ್ಥಿತಿ ಅವರನ್ನು ಮನೆಯಲ್ಲೇ ಇರುವಂತೆ ಮಾಡಿದೆ. ಇದರಿಂದ ಅವರಿಗೆ ತೀವ್ರ ಬೇಸರವನ್ನೂ ಉಂಟುಮಾಡಿದೆ.

ಈ ಎಲ್ಲಾ ಕಾರಣದಿಂದಾಗಿ ಅದರಲ್ಲೂ ಕೊರೊನಾ ಮುನ್ನೆಚರಿಕೆ ಹಿನ್ನೆಲೆ ವಯಸ್ಸಾದವರನ್ನು ನೋಡಿಕೊಳ್ಳಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಈ ಕೆಳಗಿನ ಸಲಹೆಗಳನ್ನು ಶಿಫಾರಸು ಮಾಡುತ್ತದೆ.

ಕುಟುಂಬದ ಜೊತೆ ಅಮೂಲ್ಯ ಸಮಯ:

ಈ ತಂತ್ರಜ್ಞಾನದ ಯುಗದಲ್ಲಿ ಪ್ರತೊಯೊಬ್ಬರು ಒಂದಲ್ಲಾ ಒಂದು ಗೀಳಿಗೆ ಅಂಟಿಕೊಂಡಿರುತ್ತಾರೆ. ಇದನ್ನು ಬಿಟ್ಟು ಈ ಸಮಯದಲ್ಲಿ ಕುಟುಂಬದ ಜೊತೆ ಕಾಲ ಕಳೆಯಬೇಕು. ಮಕ್ಕಳನ್ನು ಅಜ್ಜ-ಅಜ್ಜಿಯ ಜೊತೆ ಆಡಲು ಬಿಡಬೇಕು. ಅಥವಾ ವಯಸ್ಸಾದವರಿಂದ ದೂರ ಇದ್ದರೆ ಅವರ ಜೊತೆ ವಿಡಿಯೋ ಕಾಲ್​ ಮಾಡುವುದರ ಮುಖಾಂತರ ಅವರ ಜೊತೆ ಮಾತನಾಡಬೇಕೆ. ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿ ಅವರ ನಿರ್ಧಾರಗಳನ್ನು ಆಲಿಸಬೇಕು.

ದೈನಂದಿನ ಕೆಲಸಗಳಲ್ಲಿ ಭಾಗಿ:

ಅವರಿಂದ ಬೇಸರ ಹೋಗಲಾಡಿಸಲು ಕೆಲ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಸಬೇಕು. ತರಕಾರಿಗಳನ್ನು ಕತ್ತರಿಸಿವುದು, ವಸ್ತುಗಳನ್ನು ಸರಿಯಾಗಿ ಜೋಡಿಸಿ ಇಡುವುದು, ತೋಟಗಾರಿಕೆ ಅಥವಾ ಇತರೆ ಸಣ್ಣ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಮಾಡುವುದು. ಇದರಿಂದ ವಯಸ್ಸಾದವರಿಗೆ ಸಂತಸ ಉಂಟಾಗುತ್ತದೆ ಹಾಗೂ ಬೇಸರ ಮಾಯವಾಗಿ ಎಂದಿನಂತೆ ಜೀವನ ಮಾಡುತ್ತಾರೆ.

ಮನರಂಜನಾ ಚಟುವಟಿಕೆ:

ಮನರಂಜನಾ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯ ಕಳೆಯುವಂತೆ ಮಾಡಬೇಕು. ಮೊಮ್ಮಕ್ಕಳ ಜೊತೆ ಲುಡೋ, ಚೆಸ​ , ಕ್ಯಾರಂಬೋರ್ಡ್​ನಂತಹ ಆಟಗಳಲ್ಲಿ ಭಾಗಿಯಾಗುವಂತೆ ಮಾಡಬೇಕು.

ವ್ಯಾಯಾಮ ಬಹು ಮುಖ್ಯ:

ಎಲ್ಲಾ ವಯಸ್ಸಿನ ಜನರಿಗೆ ದೈಹಿಕ ಸಾಮರ್ಥ್ಯವು ಅವಶ್ಯಕವಾಗಿದೆ. ಆದರೆ, ಹಿರಿಯರು ಹೆಚ್ಚಾಗಿ ತಮ್ಮ ಸಮಯವನ್ನು ಮನೆಯೊಳಗೆಯೇ ಕಳೆಯುತ್ತಾರೆ.ಈ ಹಿನ್ನೆಲೆ ಅವರು ಸರಳವಾದ ವ್ಯಾಯಾಮ, ಯೋಗ ಮತ್ತು ಧ್ಯಾನ ಮಾಡುವುದರಿಂದ ಹೆಚ್ಚಿನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಸಹಾಯ ಮಾಡುತ್ತದೆ.

ಸಂಪರ್ಕದಲ್ಲಿರುವುದು:

ಇಂದಿನ ಸನ್ನಿವೇಶದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತೀ ಪ್ರಮುಖವಾಗಿದೆ. ಇದನ್ನು ಪರಿಗಣನೆಗೆ ತೆಗೆದುಕೊಂಡು ಹಿರಿಯರು ದೂರದ ಊರುಗಳಲ್ಲಿ ಇದ್ದರೆ ಅವರ ಜೊತೆ ವಿಡಿಯೋ ಅಥವಾ ಸಾಮಾನ್ಯ ಕರೆ ಮಾಡಿ ಮಾತನಾಡಬೇಕು. ಈ ರೀತಿ ಮಾತನಾಡುವುದರಿಂದ ಅವರಿಗೆ ಸಂತಸ ಉಂಟಾಗುತ್ತದೆ. ಈ ಹಿನ್ನೆಲೆ ಅವರು ಬೇರೆ ಆಲೋಚನೆ ಮಾಡುವುದನ್ನು ಬಿಡುತ್ತಾರೆ.

ಒಳ್ಳೆಯ ಸುದ್ದಿಗಳನ್ನು ನೋಡುವುದು:

ಪ್ರಸ್ತುತ ದಿನಗಳಲ್ಲಿ ಹಲವಾರು ಸುದ್ದಿ ಮಾಧ್ಯಮಗಳು ನಿರಂತರವಾಗಿ ಸುದ್ದಿಗಳನ್ನು ಬಿತ್ತರಮಾಡುತ್ತಿದೆ.ಇದರಿಂದ ಅದೆಷ್ಟೊ ಜನರಿಗೆ ಭಯದ ವಾತಾವರಣ ನಿರ್ಮಾಣಾಗಿದೆ. ಈ ಕಾರಣಕ್ಕಾಗಿ ವಿಶ್ವಾಸಾರ್ಹ ಸುದ್ದಿಗಳನ್ನು ಮಾತ್ರ ನೋಡಬೇಕು. ಅದು ನಿಗದಿತ ಸಮಯದಲ್ಲಿ ಮಾತ್ರ. ಉಳಿದ ಸಮಯ ಸಂಗೀತ ಆಲಿಸುವುದು, ಹಾಸ್ಯಕಾರ್ಯಕ್ರಮಗಳನ್ನು ನೋಡುವಂತೆ ಮಾಡುವುದು ಮಹುಮುಖ್ಯ ಇದರಿಂದ ಮನಸ್ಸಿಗೆ ಆಹ್ಲಾದ ದೊರೆಯುತ್ತದೆ.

ಕೊರೊನಾ ವಿರುದ್ಧ ಹೋರಾಡಲು ಭಾರತ ನಿರಂತರವಾಗಿ ಪ್ರಯತ್ನಿಸುತ್ತಿದೆ. ಮನೆಯಲ್ಲಿಯೇ ಇರುವುದು ಮತ್ತು ನಮ್ಮ ಮನೆಗಳಲ್ಲಿನ ಮನಸ್ಥಿತಿಯನ್ನು ಶಾಂತವಾಗಿ ಮತ್ತು ಒತ್ತಡರಹಿತವಾಗಿರಿಸುವುದರ ಮೂಲಕ ನಾವು ನಮ್ಮ ಕೆಲಸವನ್ನು ಮಾಬೇಕಿದೆ. ವಯಸ್ಸಾದ ಜನರು ಇದರಿಂದ ಭಪಡಬೇಕಿಲ್ಲ. ಅವರ ಜೊತೆ ನಾವೆಲ್ಲರೂ ನಿಲ್ಲಬೇಕು. ಆರೋಗ್ಯಾಧಿಕಾರಿಗಳು ನೀಡುವ ಮಾರ್ಗದರ್ಶನದಂತೆ ಅವರನ್ನು ಎಚ್ಚರಿಕೆಯಿಂದ ಸಲಹಬೇಕಿದೆ. ಇದೆಲ್ಲ ನಮ್ಮ ನಿಮ್ಮೆಲ್ಲರ ಜವಾಬ್ದಾರಿಯೂ ಹೌದು.

Last Updated : Apr 5, 2020, 3:24 PM IST

ABOUT THE AUTHOR

...view details