ಚಂಡೀಗಢ:ಇತ್ತೀಚಿನ ದಿನಗಳಲ್ಲಿ ಹಣ ಡ್ರಾ ಮಾಡಲು ಜನರು ಬ್ಯಾಂಕ್ಗಳಿಗೆ ತೆರಳುವುದು ಕಡಿಮೆ. ಬದಲಾಗಿ ಎಟಿಎಂಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಆದರೆ ಈ ವೇಳೆ ಕಿರಾತಕರು ಸಾರ್ವಜನಿಕರಿಗೆ ಮೋಸ ಮಾಡಬಹುದು. ಕ್ಯಾಮೆರಾ ಮೂಲಕ ಎಟಿಎಂನ ಮಾಹಿತಿಗಳನ್ನು ಗೌಪ್ಯವಾಗಿ ಸೆರೆಹಿಡಿಯಬಹುದು ಎಂದು ಸೈಬರ್ ತಜ್ಞ ರಾಜೇಶ್ ರಾಣಾ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಖದೀಮರು ಎಟಿಎಂಗಳಲ್ಲಿ ಗೌಪ್ಯವಾಗಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಎಟಿಎಂನ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ, ಕ್ರೆಡಿಟ್/ ಡೆಬಿಟ್ ಕಾರ್ಡ್‌ಗಳನ್ನು ಡೂಪ್ಲಿಕೇಟ್ ಮಾಡಿಯೂ ನೀಡಬಹುದು. ಅಥವಾ ಸಹಾಯ ಮಾಡುವ ನೆಪದಲ್ಲಿ ಮೂಲ ಕಾರ್ಡ್ ಬದಲಾಗಿ ನಕಲಿ ಕಾರ್ಡ್ ವಿನಿಮಯ ಮಾಡಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಓದಿ:ಸೈಬರ್ ಕ್ರೈಂ .. ಜಗತ್ತಿನ ಅತಿ ದೊಡ್ಡ ಅಪರಾಧ ಜಾಲ
ಅಪರಾಧಿಗಳು ಸಾಮಾನ್ಯವಾಗಿ ಎಟಿಎಂನಲ್ಲಿ ಕಾರ್ಡ್ ಸ್ಕ್ಯಾನರ್ ಅಳವಡಿಸುತ್ತಾರೆ. ಬಳಿಕ ಸಾರ್ವಜನಿಕರು ಬಂದು ಎಟಿಎಂ ಮಷಿನ್ ಬಳಸಿದಾಗ ಅದು ಕಾರ್ಡನ್ನು ಸ್ಕ್ಯಾನ್ ಮಾಡುತ್ತದೆ. ಈ ಮೂಲಕ ಸಿವಿವಿ, ಕಾರ್ಡ್ ಸಂಖ್ಯೆ ಸೇರಿದಂತೆ ಪ್ರತಿಯೊಂದು ವಿವರವನ್ನು ಸ್ಕ್ಯಾನರ್ ಸೆರೆಹಿಡಿಯುತ್ತದೆ. ಇದನ್ನು ಅನುಸರಿಸಿ ಡೂಪ್ಲಿಕೇಟ್ ಕಾರ್ಡ್ ತಯಾರಿಸುತ್ತಾರೆ. ಇನ್ನು ಪಿನ್ ನಂಬರ್ ಸೆರೆಹಿಡಿಯಲು ಕ್ಯಾಮರಾ ಬಳಕೆ ಮಾಡುತ್ತಾರೆ. ಈ ಮೂಲಕ ಕಷ್ಟಪಟ್ಟು ಸಂಪಾದಿಸಿದ ಹಣ ಖದೀಮರ ಪಾಲಾಗುತ್ತದೆ ಎಂದು ಅವರು ಹೇಳಿದರು.
ತಮ್ಮ ಪಿನ್ ಸಂಖ್ಯೆಯನ್ನು ಎಟಿಎಂ ಕೇಂದ್ರದಲ್ಲಿ ನಮೂದು ಮಾಡುವಾಗ ಜಾಗರೂಕತೆ ವಹಿಸಬೇಕು. ಹಾಗಾಗಿ ಆಗಾಗ ಕಾರ್ಡ್ ಪಿನ್ ಸಂಖ್ಯೆಯನ್ನು ಬದಲಾಯಿಸುತ್ತಿರಬೇಕು ಎಂದು ಸೂಚಿಸಿದ್ದಾರೆ.