ಕರ್ನಾಟಕ

karnataka

ರಾಮೇಶ್ವರಂ ಕಡಲ ತೀರದಲ್ಲಿ 'ಆಲಿವ್​ ರಿಡ್ಲೇ' ಆಮೆಯ ಕಳೇಬರ ಪತ್ತೆ

By

Published : Nov 16, 2019, 1:08 PM IST

ಆಲಿವ್​ ರಿಡ್ಲೇ ಪ್ರಭೇದಕ್ಕೆ ಸೇರಿದ ಆಮೆಯೊಂದು ತಮಿಳುನಾಡಿನ ರಾಮೇಶ್ವರಂ ಕಡಲ ತೀರದಲ್ಲಿ ಪತ್ತೆಯಾಗಿದೆ. ಸಮುದ್ರ ಆಮೆಗಳಲ್ಲೇ ಅಳಿವಿನಂಚಿನಲ್ಲಿರುವ ಅಪರೂಪದ ಆಮೆ ಇದಾಗಿದೆ. ಇವು ವಾಸಿಸುವ ಪ್ರದೇಶಗಳು ಪ್ರಪಂಚದಲ್ಲಿ ಅತೀ ಕಡಿಮೆ ಸಂಖ್ಯೆಯಲ್ಲಿ ಕಾಣ ಸಿಗುತ್ತದೆ. ಒಡಿಶಾದ ಗಾಹಿರ್ ಮಾತಾ ಬೀಚ್‌ ಇಂಥ ಆಮೆಗಳ ಸಂತತಿ ವಾಸಿಸುವ ಪ್ರಪಂಚದ ಕೆಲವೇ ಕೆಲವು ಪ್ರದೇಶಗಳಲ್ಲಿ ಒಂದು.

ಆಲಿವ್​ ರಿಡ್ಲೇ ಆಮೆಯ ಕಳೇಬರ ಪತ್ತೆ

ರಾಮೇಶ್ವರಂ(ತಮಿಳುನಾಡು) :ಇಲ್ಲಿನ ಸಂಗುಮಲ್​ ಕಡಲ ತೀರದಲ್ಲಿ ಆಲಿವ್​ ರಿಡ್ಲೇ ಜಾತಿಯ ಅಪರೂಪದ ಆಮೆಯೊಂದರ ಕಳೇಬರ ಪತ್ತೆಯಾಗಿದೆ.

ಆಲಿವ್​ ರಿಡ್ಲೇ, ಆಮೆ ಪ್ರಭೇದದಲ್ಲೇ ಎರಡನೇ ಚಿಕ್ಕ ಜಾತಿಯ ಆಮೆಯಾಗಿದ್ದು, ಸಮುದ್ರ ಆಮೆಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವ ಆಮೆಗಳಾಗಿವೆ. ಆದ್ರೆ ಈ ಸಮುದ್ರ ಜೀವಿ ಇದೀಗ ರೆಡ್‌ಬುಕ್‌ನಲ್ಲಿ ಅಳಿವಿನಂಚಿನ ಪ್ರಭೇದ ಎಂದು ಗುರುತಿಸಿಕೊಂಡಿದೆ. ಈ ಪ್ರಭೇದಕ್ಕೆ ಸೇರಿದ ಆಮೆಗಳು ಬೆಚ್ಚ ಮತ್ತು ಉಷ್ಣವಲಯದ ನೀರಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಮುಖ್ಯವಾಗಿ ಪೆಸಿಫಿಕ್, ಭಾರತೀಯ ಸಾಗರಗಳು ಹಾಗೂ ಅಟ್ಲಾಂಟಿಕ್ ಸಾಗರದ ಬೆಚ್ಚಗಿನ ನೀರಿನಲ್ಲಿ ಇವುಗಳನ್ನು ನೋಡಬಹುದು.

ಆಲಿವ್​ ರಿಡ್ಲೇ ಆಮೆಯ ಕಳೇಬರ ಪತ್ತೆ

ಸಮುದ್ರದಲ್ಲಿ ಈಜುತ್ತಾ ಬಂದು ಆಮೆ ದಡಕ್ಕೆ ಅಪ್ಪಳಿಸಿರಬಹುದು ಎಂದು ಈ ಭಾಗದ ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ. ಈ ಸೀಸನ್​ನಲ್ಲಿ ಈ ರೀತಿ ಸಂಭವಿಸುತ್ತದೆ ಎಂದು ಮೀನುಗಾರರು ತಿಳಿಸಿದ್ದಾರೆ.

ABOUT THE AUTHOR

...view details