ತೆಲಂಗಾಣ: ಕರ್ತವ್ಯದ ಮೇಲೆ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗೆ ಕಾರಿನಲ್ಲಿ ಬಂದ ನಾಲ್ವರು ಯುವಕರು, ಗಾಡಿ ನಿಲ್ಲಿಸದೇ ಗುದ್ದಿ ಹೋಗಿರುವ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಅನಂತಗಿರಿ ನಗರದಲ್ಲಿ ನಡೆದಿದೆ.
ತಪಾಸಣೆ ನಡೆಸುತ್ತಿದ್ದ ಎಸ್ಐಗೆ ಗುದ್ದಿದ ಕಾರು... ಯುವಕರ ಬಂಧನ - ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಅನಂತಗಿರಿ ನಗರ
ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಅನಂತಗಿರಿ ನಗರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗೆ ಕಾರಿನಲ್ಲಿ ಬಂದ ನಾಲ್ವರು ಯುವಕರು ಗಾಡಿಯಿಂದ ಗುದ್ದಿದ ಪರಿಣಾಮ ಪೊಲೀಸ್ ಕಾಲಿಗೆ ಬಲವಾದ ಗಾಯಗಳಾಗಿವೆ. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಪಾಸಣೆ ನಡೆಸುತ್ತಿದ್ದ ಎಸ್ಐಗೆ ಗುದ್ದಿದ ಕಾರು
ಅನಂತಗಿರಿ ನಗರದಲ್ಲಿ ತಪಾಸಣೆ ಮಾಡುತ್ತಿದ್ದ ಎಸ್ ಐ ಕೃಷ್ಣ, ಕಾರೊಂದನ್ನು ಅಡ್ಡಗಟ್ಟಿದ್ದರು. ಆದರೆ ಕಾರು ನಿಲ್ಲಿಸದ ಯುವಕರು ಸಬ್ ಇನ್ಸ್ಪೆಕ್ಟರ್ಗೆ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಪೊಲೀಸ್ ಕಾಲಿಗೆ ಬಲವಾದ ಗಾಯವಾಗಿದ್ದು, ಅವರನ್ನು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್, ಅನ್ವರ್, ನಾವಿದ್ ಹಾಗೂ ಸಮೀರ್ ಬಂಧಿತರು. ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ.