ರಾಂಪುರ್ (ಹಿಮಾಚಲಪ್ರದೇಶ): ದೆಹಲಿಯಿಂದ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರ ಕಾರು ಶಿಮ್ಲಾದ ನರ್ಕಂಡಾದ ಬಳಿ ಕಂದಕಕ್ಕೆ ಬಿದ್ದ ಪರಿಣಾಮ, ಮೂವರು ಸಾವನ್ನಪ್ಪಿದ್ದಾರೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಶಿಮ್ಲಾದ ಐಜಿಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ಎಂದು ದಾಖಲಿಸಲಾಗಿದೆ.
ಇವರೆಲ್ಲರು ದೆಹಲಿಯಿಂದ ನರ್ಕಂಡಾವನ್ನು ನೋಡಲು ಬಂದಿದ್ದರು. ನರ್ಕಂಡಾದ ಡೋಗ್ರಾ ಬಳಿ ಕಾರು ಆಯತಪ್ಪಿ 300 ಮೀಟರ್ ಆಳದ ಕಂದಕಕ್ಕೆ ಬಿದ್ದಿದೆ. ಅಪಘಾತದಲ್ಲಿ 3 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಕಂದಕದಿಂದ ಮೇಲೆತ್ತಲಾಗಿದೆ.