ಚಿತ್ತೂರು:ಲಾರಿ-ಕಾರು ನಡುವೆ ಡಿಕ್ಕಿ ಸಂಭವಿಸಿ, ಐವರು ಸಾವಿಗೀಡಾದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುರುವರಾಜುಪಲ್ಲಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಲಾರಿ-ಕಾರು ಡಿಕ್ಕಿ: ತಿರುಮಲಕ್ಕೆ ಹೋಗುತ್ತಿದ್ದ ಐವರ ದುರ್ಮರಣ - undefined
ಪೂತಲಪಟ್ಟು- ನಾಯುಡುಪೇಟ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ-ಕಾರು ನಡುವೆ ಡಿಕ್ಕಿ ಸಂಭವಿಸಿ, ಐವರು ಮೃತಪಟ್ಟು, ಉಳಿದ ಐವರು ಗಾಯಗೊಂಡಿದ್ದಾರೆ.
![ಲಾರಿ-ಕಾರು ಡಿಕ್ಕಿ: ತಿರುಮಲಕ್ಕೆ ಹೋಗುತ್ತಿದ್ದ ಐವರ ದುರ್ಮರಣ](https://etvbharatimages.akamaized.net/etvbharat/prod-images/768-512-3493757-thumbnail-3x2-gggg.jpg)
Car
ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ
ಪೂತಲಪಟ್ಟು- ನಾಯುಡುಪೇಟ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರುಂತ ಸಂಭವಿಸಿದೆ. ರುದ್ರಾವರಂನಿಂದ ತಿರುಮಲಕ್ಕೆ ತೆರಳುತ್ತಿದ್ದಾಗ ಲಾರಿ ಹಿಂಬದಿಗೆ ಕಾರು ಗುದ್ದಿದ ಪರಿಣಾಮ ಐವರು ಮೃತಪಟ್ಟು, ಉಳಿದ ಐವರು ಗಾಯಗೊಂಡಿದ್ದಾರೆ.
ಗಾಯಗೊಂಡ ಐವರನ್ನು ತಿರುಪತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ