ಸಿರಿಯಾ :ಶನಿವಾರ ನಡೆದ ಕಾರ್ ಬಾಂಬ್ ದಾಳಿಯಲ್ಲಿ ಸುಮಾರು 10 ಮಂದಿ ಸಾವನ್ನಪ್ಪಿರುವ ಘಟನೆ ಸಿರಿಯಾದ ತಾಲ್ ಅಬ್ಯಾದ್‌ನಗರದಲ್ಲಿ ನಡೆದಿದೆ.
ಉಗ್ರರ ಅಟ್ಟಹಾಸ.. ಕಾರ್ ಬಾಂಬ್ ಸ್ಫೋಟಗೊಂಡು 10 ಜನ ದುರ್ಮರಣ! - ಸಿರಿಯಾದಲ್ಲಿ ಕಾರ್ ಬಾಂಬ್ ಸ್ಪೋಟ
ಸಿರಿಯಾದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಶನಿವಾರ ನಡೆದ ಕಾರ್ ಬಾಂಬ್ ದಾಳಿಯಲ್ಲಿ ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ.
ಕಾರಿನಲ್ಲಿ ಬಾಂಬ್ ಅಳವಡಿಸಿ ತಾಲ್ ಅಬ್ಯಾದ್ ನಗರದಲ್ಲಿ ಉಗ್ರರು ಸ್ಫೋಟ ನಡೆಸಿದ್ದಾರೆ. ಸ್ಫೋಟದ ಪರಿಣಾಮ 10 ನಾಗರಿಕರು ಸಾವನ್ನಪ್ಪಿದ್ದಾರೆ. 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಇನ್ನು, ಇತ್ತೀಚೆಗೆ ಉತ್ತರ ಸಿರಿಯಾದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದರು. ಸುಲಾಕ್ ಗ್ರಾಮದಲ್ಲಿ ಸಂಭವಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ 8 ಜನ ಸಾವನ್ನಪ್ಪಿದ್ದರು. ನವೆಂಬರ್ನ ಮೊದಲ ವಾರದಲ್ಲಿಯೂ ಉಗ್ರರು ದಾಳಿ ನಡೆಸಿ 10 ಜನರ ಪ್ರಾಣ ತೆಗೆದಿದ್ದರು. ನವೆಂಬರ್ ಕೊನೆ ವಾರದಲ್ಲಿ ಉಗ್ರರು ಮತ್ತೆ ದಾಳಿ ನಡೆಸಿ 10 ಮಂದಿ ಪ್ರಾಣ ಬಲಿ ಪಡೆದಿದ್ದಾರೆ. ಕುರ್ದಿಶ್ ಲೆಡ್ ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ಹೇಳಿದೆ.