ಹೈದರಾಬಾದ್ : ಗಾಂಜಾ ಕಳ್ಳಸಾಗಣೆ ಹಾಗೂ ವ್ಯಾಪಾರ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ರಾಚಕೊಂಡ ಪೊಲೀಸರು ಬಂಧಿಸಿದ್ದಾರೆ. ಸುಮಾರು 1.3 ಕೋಟಿ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಬಂಧಿತರಿಂದ 194 ಪ್ಯಾಕೆಟ್‌ಗಳಲ್ಲಿದ್ದ 1,010 ಕೆಜಿ ಗಾಂಜಾ, ಒಂದು ಕಂಟೇನರ್ ಲಾರಿ, 4,000 ರೂ. ನಗದು ಮತ್ತು ಎರಡು ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿ ಪ್ಯಾಕೆಟ್‌ನಲ್ಲಿ ಐದಾರು ಕೆಜಿ ಗಾಂಜಾ ತುಂಬಲಾಗಿತ್ತು. ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ಭಾಗಿಯಾಗಿದ್ದು, ಅವರನ್ನು ಬಂಧಿಸಲಾಗವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಂಟೇನರ್ನಲ್ಲಿ ಸಾಗಿಸುತ್ತಿದ್ದ 1.3 ಕೋಟಿ ಮೌಲ್ಯದ ಗಾಂಜಾ ವಶಕ್ಕೆ ಬಂಧಿತ ಮೊಹಮ್ಮದ್ ರಂಜಾನ್ ಮತ್ತು ಗೌತಮ್ ರಾವ್ ಹರಿಯಾಣದವರಾಗಿದ್ದಾರೆ. ಅಲ್ಲದೆ ಮತ್ತೋರ್ವ ಆರೋಪಿ ಒಡಿಶಾದ ಮಹಾದೇವ್ ಸ್ಥಳೀಯ ಗಾಂಜಾ ಬೆಳೆಗಾರರಿಂದ ಗಾಂಜಾ ಖರೀದಿಸುತ್ತಿದ್ದ. ಇನ್ನೋರ್ವ ಆರೋಪಿ ಹರಿಯಾಣದ ಇಮ್ರಾನ್ ಕಂಟೇನರ್ನೊಂದಿಗೆ ಒಡಿಶಾಗೆ ತೆರಳಿ, ಅಲ್ಲಿನವರಿಗೆ ಲಾರಿಯನ್ನು ಹಸ್ತಾಂತರಿಸುತ್ತಿದ್ದ. ಬಳಿಕ ವಿವೇಕ್ ಸಿಂಗ್ ಎಂಬಾತ ಲಾರಿಯನ್ನು ಮಹಾದೇವ್ ಇದ್ದ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಗಾಂಜಾ ಲೋಡ್ ಮಾಡುದ್ದರು. ನಂತರ ಇಮ್ರಾನ್ ಲಾರಿಯನ್ನು ವಿಜಯವಾಡ ಮೂಲಕ ವಾರಣಾಸಿಗೆ ತೆಗೆದುಕೊಂಡು ಹೊರಟಿದ್ದ.
ಲಾರಿ ಹೊರಟಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ನಾಪತ್ತೆಯಾದ ಮೂವರು ಆರೋಪಿಗಳಾದ ಮಹಾದೇವ್, ವಿವೇಕ್ ಸಿಂಗ್ ಮತ್ತು ಇಮ್ರಾನ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.