ಕರ್ನಾಟಕ

karnataka

ETV Bharat / bharat

ಕ್ಯಾನ್ಸರ್‌ ಪೀಡಿತರಿಗೆ ಕೊರೊನಾ ಸೋಂಕು ತಗುಲಿದರೆ ಅಪಾಯ ಹೆಚ್ಚು - ಡಾ.ತಪಸ್ವಿನಿ ಪ್ರಧಾನ್

ಕ್ಯಾನ್ಸರ್‌ ಪೀಡಿತರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕೊರೊನಾ ಸೋಂಕು ತಗುಲಿದರೆ ಹೆಚ್ಚಿನ ಅಪಾಯವಿದೆ ಎಂದು ಫೋರ್ಟಿಸ್ ಆಸ್ಪತ್ರೆಯ‌ ಹಿರಿಯ ಆಂಕೊಲಾಜಿಸ್ಟ್ ಅಭಿಪ್ರಾಯಪಟ್ಟಿದ್ದಾರೆ. ಅಧ್ಯಯನವೊಂದರ ಮಾಹಿತಿಯನ್ನು ಆಧರಿಸಿ ಕ್ಯಾನ್ಸರ್‌ ರೋಗಿಗಳ ಮೇಲೆ ಕೋವಿಡ್-‌19 ಪರಿಣಾಮಗಳ ಕುರಿತು ವಿವರಿಸಿದ್ದಾರೆ.

cancer-patients-on-anticancer-treatments-chemotherapy-highly-vulnerable-to-covid-19-says-oncologist
ಕ್ಯಾನ್ಸರ್‌ ಪೀಡಿತರಿಗೆ ಕೊರೊನಾ ಸೋಂಕು ತಗುಲಿದರೆ ಹೆಚ್ಚಿನ ಅಪಾಯ ; ಆಂಕೊಲಾಜಿಸ್ಟ್‌

By

Published : Jun 3, 2020, 9:24 PM IST

ನವದೆಹಲಿ: ಜಗತ್ತಿನಾದ್ಯಂತ ಮಹಾಮಾರಿ ಕೋವಿಡ್‌-19 ತನ್ನ ಹರಡುವಿಕೆಯ ವೇಗವನ್ನು ಹೆಚ್ಚಿಸಿಕೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದೀಗ ಜಾಗತಿಕ ಲಾಕ್‌ಡೌನ್‌ನಿಂದಾಗಿ ಕ್ಯಾನ್ಸರ್‌ ಸೇರಿದಂತೆ ಕೋವಿಡೇತರ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಕ್ಯಾನ್ಸರ್‌ ಪೀಡಿತರಿಗೆ ಕೊರೊನಾ ಸೋಂಕು ತಗುಲಿದರೆ ಅಪಾಯ ಹೆಚ್ಚು: ಆಂಕೊಲಾಜಿಸ್ಟ್‌

ಕ್ಯಾನ್ಸರ್‌ ಪೀಡಿತರ ಮೇಲೆ ಕೋವಿಡ್‌-19 ಪರಿಣಾಮಗಳ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿರುವ ಫೋರ್ಟಿಸ್​​‌ ಆಸ್ಪತ್ರೆಯ ಹಿರಿಯ ಆಂಕೊಲಾಜಿಸ್ಟ್‌ ಡಾ. ತಪಸ್ವಿನಿ ಪ್ರಧಾನ್‌, ಎಲ್ಲಾ ಆಸ್ಪತ್ರೆಗಳು, ಕೇರ್‌ ಸೆಂಟರ್‌ಗಳು ಕೊರೊನಾ ವೈರಸ್‌ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ನಿರತರಾಗಿವೆ. ಇದೀಗ ಕ್ಯಾನ್ಸರ್‌ ರೋಗಿಗಳಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆಗಳು ಸಿಗದಿರುವುದು ಅವರ ಆತಂಕವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ಕ್ಯಾನ್ಸರ್‌ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಪರಿಣಾಮ ಕೊರೊನಾ ಸೋಂಕು ತಗುಲಿದರೆ ಹೆಚ್ಚಿನ ಅಪಾಯವಿದೆ. ದೇಶದಲ್ಲಿ ಆರೋಗ್ಯದ ಸ್ಥಿತಿಗತಿ ಕುರಿತು ಅಧ್ಯಯನವೊಂದು ಇದನ್ನು ಒತ್ತಿ ಹೇಳಿದೆ. ಸಾವಿರಾರು ಮಂದಿ ಕ್ಯಾನ್ಸರ್‌ ಪೀಡಿತರು ಈಗಾಗಲೇ ರೇಡಿಯೋ ಥೆರಪಿ, ಕಿಮೋ ಥೆರಪಿ ಪಡೆಯುತ್ತಿದ್ದಾರೆ. ಇಂತಹ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಕೊರೊನಾ ವೈರಸ್‌ನ ಅಪಾಯ ಹೆಚ್ಚಿದೆ ಎಂದು ಅಧ್ಯಯನವೊಂದು ನೀಡಿರುವ ಮಾಹಿತಿಯನ್ನು ಆಧರಿಸಿ ಈ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details