ಒಟ್ಟಾವಾ ( ಕೆನಡಾ): ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳು ವಿವಿಧ ರಾಷ್ಟ್ರಗಳಲ್ಲಿ ಮಾರ್ದನಿಸುತ್ತಿದ್ದು, ಈ ಪ್ರತಿಭಟನೆಗಳ ಬಗ್ಗೆ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರೂಡೋ ಕಾಳಜಿ ವ್ಯಕ್ತಪಡಿಸಿದ್ದಾರೆ.
ಸಿಖ್ ಉತ್ಸವವಾದ ಗುರುಪುರಬ್ಗೆ ಶುಭಾಶಯ ಕೋರುವ ವೇಳೆ ಮಾತನಾಡಿದ ಸ್ಟಿನ್ ಟ್ರೂಡೋ ಭಾರತದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಕುರಿತಾಗಿ ಕಳವಳವಾಗುತ್ತಿದೆ. ಕೆನಡಾ ಶಾಂತಿಯುತ ಪ್ರತಿಭಟನಾಕಾರರ ಹಕ್ಕುಗಳನ್ನು ರಕ್ಷಿಸುತ್ತದೆ ಎಂದಿದ್ದಾರೆ.
ಭಾರತೀಯ ಪ್ರಾಧಿಕಾರಗಳಿಗೆ ತಮ್ಮ ಕಾಳಜಿ ತಿಳಿಸಿದ್ದೇವೆ ಎಂದ ಅವರು ಎಲ್ಲರೂ ತಮ್ಮ ಕುಟುಂಬ ಹಾಗೂ ಸ್ನೇಹಿತರ ಕುರಿತು ಚಿಂತೆ ಮಾಡುತ್ತೇವೆ ಎಂದು ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದಾರೆ.