ತಮಿಳುನಾಡು:ಫೇಸ್ಬುಕ್ನಲ್ಲಿ ಅರಳುವ ಪ್ರೇಮ, ವಿವಾಹಕ್ಕೆ ಮೆಟ್ಟಿಲಾಗುವ ಕಥೆಗಳನ್ನು ಕೇಳಿದ್ದೀರಿ. ಈ ಸಂಬಂಧ ದೇಶ, ದೇಶಗಳನ್ನೂ ದಾಟಿ ಮುಂದುವರಿಯುತ್ತದೆ ಎಂದರೆ ನೀವು ನಂಬಲೇಬೇಕು.
ಕೆನಡಾದ ಜೋಸ್ಪಿನ್ ಹಾಗೂ ಮಹಾರಾಷ್ಟ್ರ ಮೂಲದ ವೈಭವ್ ಇವರಿಬ್ಬರ ಮದುವೆಇಂದು ಕೊಡೈಕೆನಾಲ್ದ ಭಾರತಿ ಅಣ್ಣಾ ನಗರದ ಮಾರಿಯಮ್ಮನ್ ದೇವಸ್ಥಾನದಲ್ಲಿ ಅವರ ವಿವಾಹ ಜರುಗಿದೆ. ಇವರಿಬ್ಬರ ಸಂಬಂಧ ಚಿಗುರಿದ್ದು ಫೇಸ್ಬುಕ್ನಿಂದ.
ಮಹಾರಾಷ್ಟ್ರ ಮೂಲದ ಯುವಕನನ್ನು ತಮಿಳುನಾಡಿನಲ್ಲಿ ವಿವಾಹವಾದ ಕೆನಡಾ ಯುವತಿ ಕೆನಡಾದ ಜೋಸ್ಪಿನ್ ಸಣ್ಣ ಲೇಖಕಿಯಾಗಿದ್ದು, ಪ್ರಸ್ತುತ ದಿಂಡಿಗಲ್ ಜಿಲ್ಲೆಯ ಕೊಡೈಕೆನಾಲ್ನಲ್ಲಿರುವ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಫೇಸ್‌ಬುಕ್ ಮೂಲಕ ಮಹಾರಾಷ್ಟ್ರದ ನಾಗ್ಪುರದಲ್ಲಿ ನೆಲೆಸಿರುವ ವೈಭವ್ ಅವರನ್ನು ಜೋಸ್ಪಿನ್ ಪ್ರೀತಿಸುತ್ತಿದ್ದಳು. ನಂತರ ಇವರಿಬ್ಬರು ಸತಿ ಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸುತ್ತಾರೆ.
ಅದರನುಸಾರ ಅವರ ವಿವಾಹ ಇಂದು ಕೊಡೈಕೆನಾಲ್ದ ಭಾರತಿ ಅಣ್ಣಾ ನಗರದ ಮಾರಿಯಮ್ಮನ್ ದೇವಸ್ಥಾನದಲ್ಲಿ ನಡೆಯಿತು. ಅವರ ಸಂಬಂಧಿಕರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನವ ವಿವಾಹಿತರನ್ನ ಆಶೀರ್ವದಿಸಿದರು.