ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಲ್ಪನೆಯು ಆಕರ್ಷಕವಾಗಿದ್ದರೂ ಸಹ ಅದರ ಸಾಮರ್ಥ್ಯವು ಹಲವಾರು ಕಾರಣಗಳಿಗಾಗಿ ಅಸ್ಪಷ್ಟವಾಗಿದೆ. ಮುಖ್ಯವಾಗಿ ರೋಗ ನಿರೋಧಕ ಔಷಧಿಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಸಮತೋಲನ ಮತ್ತು ಸಾಮರಸ್ಯದ ಅಗತ್ಯವಿದೆ. ಆದರೆ ರೋಗನಿರೋಧಕ ಪ್ರತಿಕ್ರಿಯೆಯ ಜಟಿಲತೆಗಳು ಮತ್ತು ಪರಸ್ಪರ ಸಂಬಂಧದ ಬಗ್ಗೆ ಸಂಶೋಧಕರಿಗೆ ಇನ್ನೂ ತಿಳಿದಿಲ್ಲ. ಈ ಬಗ್ಗೆ ದೆಹಲಿ ಮೂಲದ ಹೋಮಿಯೋಪಥಿ ಮತ್ತು ಸಂಶೋಧಕ, ಪ್ರಸ್ತುತ ಹೋಮಿಯೋಪಥಿಕ್ ಸಿಸ್ಟಮ್ ಆಫ್ ಮೆಡಿಸಿನ್ ಮಂಡಳಿಯ ಉಪಾಧ್ಯಕ್ಷರಾಗಿರುವ ಡಾ.ಎ.ಕೆ. ಅರುಣ್ ಅವರು ಈಟಿವಿ ಭಾರತ ಸುಖೀಭವ ತಂಡಕ್ಕೆ ಮಾಹಿತಿಯನ್ನು ನೀಡಿದ್ದಾರೆ. ಕೊರೊನಾ ಸೋಂಕನ್ನು ತಡೆಗಟ್ಟಲು ಮತ್ತು ಅದರ ತೀವ್ರತೆಯನ್ನುತಡೆಯಲು ಕ್ಯಾಂಪೊರಾ ರೋಗನಿರೋಧಕ ಬೂಸ್ಟರ್ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ರೋಗನಿರೋಧಕ ಪ್ರತಿಕ್ರಿಯೆಯ ಮೇಲೆ ಆಹಾರ, ವ್ಯಾಯಾಮ, ವಯಸ್ಸು, ಮಾನಸಿಕ ಒತ್ತಡ ಮತ್ತು ಇತರ ಅಂಶಗಳ ಪರಿಣಾಮಗಳನ್ನು ಸಂಶೋಧಕರು ಅನ್ವೇಷಿಸುತ್ತಿದ್ದಾರೆ. ಈ ಮಧ್ಯೆ, ರೋಗನಿರೋಧಕ ಶಕ್ತಿಯನ್ನು ಉಂಟುಮಾಡಲು ಸಾಮಾನ್ಯ ಆರೋಗ್ಯಕರ ಜೀವನ ತಂತ್ರಗಳು ಉತ್ತಮ ಮಾರ್ಗವಾಗಿದೆ.
"ಕೋವಿಡ್ - 19 ಸೋಂಕಿನ ಸಂದರ್ಭದಲ್ಲಿ ಇಮ್ಯೂನ್ ಬೂಸ್ಟರ್ ಆಗಿ ಹೋಮಿಯೋಪತಿ ಪಾತ್ರದ ಬಗ್ಗೆ ವೈಯಕ್ತಿಕ ಅನುಭವವನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. ಮಾರ್ಚ್, 2020ರಲ್ಲಿ ಕೋವಿಡ್ -19 ಪ್ಯಾನಿಕ್ ಸ್ಟೇಜ್ನಲ್ಲಿದ್ದಾಗ ಮತ್ತು ಯಾವುದೇ ನಿರ್ದಿಷ್ಟ ಲಸಿಕೆ ಲಭ್ಯವಿಲ್ಲದಿದ್ದಾಗ ಜೀವಗಳನ್ನು ಉಳಿಸುವ ಉದಾತ್ತ ಧ್ಯೇಯದೊಂದಿಗೆ ಮುಂದೆ ಬರಬೇಕೆಂಬುದು ಹಂಬಲವಾಗಿತ್ತು".
ಹೋಮಿಯೋಪತಿ ಔಷಧಿಗಳನ್ನು ಬಳಸುವುದರ ಮೂಲಕ ಲೆಪ್ಟೊಸ್ಪೈರೋಸಿಸ್ ಎಂಬ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕ್ಯೂಬಾ ದೇಶದವರು ಮುಂದಾದದರು. ಲೆಪ್ಟೊಸ್ಪೈರೋಸಿಸ್ ವಿರುದ್ಧ 2.3 ಮಿಲಿಯನ್ ಕ್ಯೂಬನ್ನರಿಗೆ ಹೋಮಿಯೋಪಥಿಕ್ ರೋಗನಿರೋಧಕವನ್ನು ಒದಗಿಸಲಾಗಿದೆ ಎಂದು 2010ರ ಪತ್ರಿಕೆಯೊಂದರಲ್ಲಿ ತಿಳಿಸಲಾಗಿದೆ. ಇದು ಗಮನಾರ್ಹ ಮಟ್ಟದಲ್ಲಿ ಸೋಂಕಿನ ಸಂಭವವನ್ನು ನಿಯಂತ್ರಿಸುತ್ತದೆ. ಲೆಪ್ಟೊಸ್ಪೈರೋಸಿಸ್ ಎಂಬುದು ಬ್ಯಾಕ್ಟೀರಿಯಾದ ಸೋಂಕು. ಅದು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುತ್ತದೆ.
"ಕೊರೊನಾ ತಡೆಗಟ್ಟುವ ಔಷಧಿಯಾಗಿ ಮತ್ತು ರೋಗನಿರೋಧಕ ಬೂಸ್ಟರ್ ಆಗಿ ಕ್ಯಾಂಪೋರಾ 1000 ಸಿಎಚ್ ಬಳಕೆ ಮಾಡಲಾಗಿದ್ದು, ಅದರ ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಕೊರೊನಾ ಪೀಡಿತ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದೇವೆ. ಈ ವೇಳೆ ರೋಗಕ್ಕೆ ತುತ್ತಾದ ಏಕಾಂಗಿ ಭಯ, ಸಾವಿನ ಭಯ, ಪ್ರತ್ಯೇಕಗೊಳ್ಳುವಿಕೆಯ ಭಯ, ಚಡಪಡಿಕೆ, ಇಡೀ ದೇಹ ಶೀತಗೊಳ್ಳುವುದು ಮುಂತಾದ ಲಕ್ಷಣಗಳನ್ನು ಅನುಭವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕೋವಿಡ್ -19 ಅನ್ನು ತಡೆಗಟ್ಟಲು ರೋಗನಿರೋಧಕ ಔಷಧಿಯಾಗಿ ಕ್ಯಾಂಪೋರಾವನ್ನು ವಿತರಿಸಬಹುದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇರಾನ್, ಇಟಲಿ, ರೊಮೇನಿಯಾ, ಫ್ರಾನ್ಸ್, ಯುಎಸ್ಎ, ಯುಕೆ ಮುಂತಾದ ದೇಶಗಳಲ್ಲಿ ವಿವಿಧ ವಿಶ್ವಾಸಾರ್ಹ ಹೋಮಿಯೋಪಥಿಗಳಿಂದ ಪ್ರಾಯೋಗಿಕ ಕ್ಲಿನಿಕಲ್ ಪ್ರಯೋಗದ ಆಧಾರದ ಮೇಲೆ ಈ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಮುಂಬೈ, ಪುಣೆ, ಔರಂಗಾಬಾದ್ನ ಕೊರೊನಾ ಪೀಡಿತ ಪ್ರದೇಶಗಳಲ್ಲಿನ ಜನಸಾಮಾನ್ಯರಲ್ಲಿ COVID-19ಗೆ ತಡೆಗಟ್ಟುವಿಕೆಯಾಗಿ ಕ್ಯಾಂಪೊರಾ ಕಾರ್ಯನಿರ್ವಹಿಸುತ್ತಿದೆ."
ಅಧ್ಯಯನಗಳು, ಅವಲೋಕನಗಳು ಮತ್ತು ಅನುಭವಗಳ ವಿಶ್ಲೇಷಣೆಯ ನಂತರ ದೆಹಲಿಯಲ್ಲಿ ನಿಗದಿಪಡಿಸಿದ ಪ್ರದೇಶದಲ್ಲಿ ಕೊರೊನಾ ನಿಯಂತ್ರಿಸಲು ಮತ್ತು ತಡೆಗಟ್ಟಲು ಕ್ಯಾಂಪೊರಾವನ್ನು ಹೋಮಿಯೋಪಥಿಕ್ ರೋಗನಿರೋಧಕವಾಗಿ ಬಳಸಲು ನಿರ್ಧರಿಸಲಾಯಿತು. ಇನ್ನು ಫಲಿತಾಂಶವು ಉತ್ತೇಜನಕಾರಿಯಾಗಿದೆ. ಕ್ಯಾಂಪೊರಾ ಡೋಸ್‌ಗಳನ್ನು ಸ್ವೀಕರಿಸಿದ ನಂತರ ಕೊರೊನಾ ಸೋಂಕಿತರು ಆರಾಮವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜಗತ್ತು ಇನ್ನೂ ಕೋವಿಡ್ -19 ಲಸಿಕೆಯಿಂದ ದೂರವಿರುವಾಗ, ಹೋಮಿಯೋಪತಿಯನ್ನು ರೋಗನಿರೋಧಕ ಬೂಸ್ಟರ್ ಮತ್ತು ತಡೆಗಟ್ಟುವ ಔಷಧಿಯಾಗಿ ಬಳಸಲು ನಾವು ಸಲಹೆ ನೀಡುತ್ತಿದ್ದೇವೆ. ರೋಗನಿರೋಧಕ ಪರಿಣಾಮವನ್ನು ಸಾಬೀತುಪಡಿಸಲು ಹೋಮಿಯೋಪಥಿಕ್ ಔಷಧಿಗಳ ಕ್ಲಸ್ಟರ್ ಕ್ಲಿನಿಕಲ್ ಪ್ರಯೋಗದ ಪ್ರಕ್ರಿಯೆಯಲ್ಲಿದೆ.