ಕರ್ನಾಟಕ

karnataka

ETV Bharat / bharat

ಕಲ್ಕತ್ತ ಪೋರ್ಟ್‌ ಟ್ರಸ್ಟ್ ಮರುನಾಮಕರ; ಕೇಂದ್ರಕ್ಕೆ ಕಾರಣ ಕೇಳಿದ ಕೋಲ್ಕತ್ತ ಹೈಕೋರ್ಟ್‌ - ಪ್ರಧಾನಿ ನರೇಂದ್ರ ಮೋದಿ

ಕಲ್ಕತ್ತ ಪೋರ್ಟ್‌ ಟ್ರಸ್ಟ್ ಗೆ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಹೆಸರು ಮರುನಾಮಕರಣವನ್ನು ರದ್ದು ಮಾಡಬೇಕೆಂದು ಕೋಲ್ಕತ್ತ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆಯಾಗಿದೆ. ಅರ್ಜಿಯ ವಿಚಾರಣೆ ನಡೆಸಿರುವ ಮುಖ್ಯನ್ಯಾಯಮೂರ್ತಿಗಳಿದ್ದ ಪೀಠ, ಹೆಸರು ಬದಲಾವಣೆಯ ಕುರಿತು 3 ವಾರಗಳನ್ನು ಅಫಿಡವಿಡ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

calcutta-hc-seeks-centres-response-on-plea-against-decision-to-rename-kolkata-port-trust
ಕಲ್ಕತ್ತ ಪೋರ್ಟ್‌ ಟ್ರಸ್ಟ್ ಮರುನಾಮಕರ; ಕೇಂದ್ರಕ್ಕೆ ಕಾರಣ ಕೇಳಿದ ಕೋಲ್ಕತ್ತ ಹೈಕೋರ್ಟ್‌

By

Published : Sep 8, 2020, 10:08 PM IST

ಕೋಲ್ಕತ್ತ (ಪಶ್ಚಿಮ ಬಂಗಾಳ) : ಕಲ್ಕತ್ತ ಪೋರ್ಟ್‌ ಟ್ರಸ್ಟ್ ಅನ್ನು ಶ್ಯಾಮ್‌ ಪ್ರಸಾದ್ ಮುಖರ್ಜಿ ಪೋರ್ಟ್ ಟ್ರಸ್ಟ್ ಎಂದು ಮರುನಾಮಕರಣ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಕೋಲ್ಕತ್ತ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಹೆಸರು ಬದಲಾವಣೆ ಮಾಡುತ್ತಿರುವ ಕುರಿತು ಮೂರು ವಾರಗಳೊಳಗಾಗಿ ಅಫಿಡವಿಡ್‌ ಸಲ್ಲಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಟಿಬಿಎನ್‌ ರಾಧಾಕೃಷ್ಣನ್‌ ಮತ್ತು ನ್ಯಾಯಮೂರ್ತಿ ಅರ್ಜಿತ್‌ ಬ್ಯಾನರ್ಜಿ ಅವರಿದ್ದ ಪೀಠ ಅರ್ಜಿಯ ವಿಚಾರಣೆ ನಡೆಸಿತು.

ನರೇನ್‌ ಚಟ್ಟೋಪಾಧ್ಯಾಯ ಎಂಬುವವರು ವಕೀಲ ಉದಯ್‌ ಶಂಕರ್‌ ಚಟ್ಟೋಪಾಧ್ಯಾಯ ಅವರ ಮೂಲಕ ಕಲ್ಕತ್ತ ಪೋರ್ಟ್‌ ಟ್ರಸ್ಟ್ ಹೆಸರು ಬದಲಾವಣೆ ಮಾಡಿರುವುದನ್ನು ರದ್ದು ಮಾಡಬೇಕು ಎಂದು ಕೋರಿ ಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದರು.

ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರ 150ನೇ ಜನ್ಮದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕಳೆದ ಜನವರಿಯಲ್ಲಿ ಬಂದರಿಗೆ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಎಂದು ಮರುನಾಮಕರಣ ಮಾಡಿದ್ದರು. ಕೇಂದ್ರ ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ಕೂಡ ದೊರಕಿತ್ತು.

ABOUT THE AUTHOR

...view details