ಅಮರಾವತಿ:ಟಿಟಿಡಿ ಹಣವನ್ನು ಹಿಂದೂಯೇತರ ಧಾರ್ಮಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಈ ವಿಚಾರವಾಗಿ ಪ್ರಮುಖ ನಿರ್ಧಾರ ಕೈಗೊಂಡಿದೆ.
ಟಿಟಿಡಿಯ ಆದಾಯ ಮತ್ತು ವೆಚ್ಚವನ್ನು ಕೇಂದ್ರ ಸರ್ಕಾರದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಲೆಕ್ಕಪರಿಶೋಧಿಸಬೇಕು ಎಂದು ಟ್ರಸ್ಟಿಗಳ ಮಂಡಳಿ ನಿರ್ಧರಿಸಿದೆ.