ನವದೆಹಲಿ:ಜಗತ್ತಿನಾದ್ಯಂತ ವ್ಯಾಪಾರ ವಹಿವಾಟು ವಿಸ್ತರಿಸುತ್ತಿರುವ ಭಾರತ, ಇದೀಗ ಎಸ್ಟೋನಿಯಾ, ಪರಾಗ್ವೆ ಹಾಗೂ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಇಂಡಿಯನ್ ಮಿಷನ್ ಆರಂಭಿಸಲು ಮುಂದಾಗಿದೆ. ಇದಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿದೆ.
ಇಂದು ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಹಿತಿ ನೀಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಎಸ್ಟೋನಿಯಾ, ಪರಾಗ್ವೆ ಹಾಗೂ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಇಂಡಿಯನ್ ಮಿಷನ್‌ಗೆ ಇಂದಿನ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಈ ದೇಶಗಳಲ್ಲಿ ವ್ಯಾಪಾರ ಉತ್ತೇಜನ, ಸಾಂಸ್ಕೃತಿಕ ಸಂಬಂಧ ವೃದ್ಧಿಯಾಗಲಿದೆ ಎಂದು ಹೇಳಿದ್ದಾರೆ.