ಕರ್ನಾಟಕ

karnataka

ETV Bharat / bharat

ಜವಳಿ ಕ್ಷೇತ್ರದ ಸಹಕಾರಕ್ಕಾಗಿ ಭಾರತ-ಜಪಾನ್​ ನಡುವಿನ ಒಪ್ಪಂದಕ್ಕೆ ಕೇಂದ್ರ ಕ್ಯಾಬಿನೆಟ್​ ಒಪ್ಪಿಗೆ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿಂದು ಮಹತ್ವದ ಕ್ಯಾಬಿನೆಟ್​ ಸಭೆ ನಡೆಸಲಾಗಿದ್ದು, ಈ ವೇಳೆ ಅನೇಕ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

Textile sector
Textile sector

By

Published : Sep 2, 2020, 9:42 PM IST

ನವದೆಹಲಿ:ಜವಳಿ ಕ್ಷೇತ್ರದಲ್ಲಿನ ಉದ್ಯಮ ವಿಸ್ತರಣೆ ಹಾಗೂ ಸಹಕಾರಕ್ಕಾಗಿ ಭಾರತ-ಜಪಾನ್​ ನಡುವಿನ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್​​ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

'ಮಿಷನ್​ ಕರ್ಮಯೋಗಿ'ಗೆ ಅನುಮೋದನೆ ನೀಡಿದ ಕೇಂದ್ರ ಕ್ಯಾಬಿನೆಟ್​... ಏನಿದು ಮಹತ್ವದ ಯೋಜನೆ!?

ಜಪಾನ್​ ಮಾರುಕಟ್ಟೆಯಲ್ಲಿ ಭಾರತೀಯ ಜವಳಿ ಮತ್ತು ಬಟ್ಟೆ ಗುಣಮಟ್ಟ ಪರೀಕ್ಷೆ ಸುಧಾರಿಸಲು ಭಾರತೀಯ ಜವಳಿ ಮತ್ತು ಜಪಾನ್​​ ನಿಸ್ಸೆನ್ಕೆನ್​ ಗುಣಮಟ್ಟ ಕೇಂದ್ರದ ನಡುವೆ ಒಪ್ಪಂದವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅದಕ್ಕೆ ಸಹಿ ಹಾಕಿದ್ದಾರೆ.

ಪ್ರಕಾಶ್​ ಜಾವಡೇಕರ್​​, ಕೇಂದ್ರ ಸಚಿವ

ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್​ ಜಾವಡೇಕರ್​, ಜವಳಿ ಉತ್ಪನ್ನ ಮತ್ತು ಬಟ್ಟೆಗಳ ಗುಣಮಟ್ಟ ಅಭಿವೃದ್ಧಿ ಪಡಿಸಲು ಇದು ಸಹಕಾರಿಯಾಗಲಿದೆ ಎಂದಿದ್ದಾರೆ. ವಿದೇಶಿ ಮಾರುಕಟ್ಟೆಯಲ್ಲಿ ಭಾರತ 2017-18ರಲ್ಲಿ 1.16 ಲಕ್ಷ ಕೋಟಿ ಮೌಲ್ಯದ ಜವಳಿ ಮಾರಾಟ ಮಾಡಿತ್ತು. ಆದರೆ 2020-21ರಲ್ಲಿ 21 ಲಕ್ಷ ಕೋಟಿ ರೂ. ಜವಳಿ ಮಾರಾಟ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details