ಕರ್ನಾಟಕ

karnataka

ETV Bharat / bharat

ಎಥೆನಾಲ್​ ಡಿಸ್ಟಿಲರಿ ಕೇಂದ್ರ ಸ್ಥಾಪನೆಗೆ ಅನುಮೋದನೆ.. 2 ಲಕ್ಷಕ್ಕೂ ಅಧಿಕ ಉದ್ಯೋಗ ನಿರೀಕ್ಷೆ - ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್

ಎಥೆನಾಲ್​ ಉತ್ಪಾದಿಸುವ ಹೊಸ ಡಿಸ್ಟಿಲರಿಗಳ ನಿರ್ಮಾಣಕ್ಕಾಗಿ 4,573 ಕೋಟಿ ರೂಪಾಯಿ ಬಿಡುಗಡೆಗೆ ಅನುಮೋದನೆ ನೀಡಲಾಗಿದ್ದು, ಬಹು ಮಾದರಿ ಲಾಜಿಸ್ಟಿಕ್ಸ್ ಮತ್ತು ಟ್ರಾನ್ಸ್​ಪೋರ್ಟ್​​ (ಸರಕು-ಸಾರಿಗೆ) ಕೇಂದ್ರ ಸ್ಥಾಪಿಸಲು ಅನುಮೋದನೆ ದೊರೆತಿದೆ. ತುಮಕೂರಲ್ಲಿ ಕೈಗಾರಿಕಾ ಕಾರಿಡರ್ ನೋಡ್ ಸ್ಥಾಪಿಸುವ ಪ್ರಸ್ತಾಪಕ್ಕೂ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

Prakash javdekar
ಸಚಿವ ಪ್ರಕಾಶ್ ಜಾವಡೇಕರ್

By

Published : Dec 30, 2020, 5:49 PM IST

ನವದೆಹಲಿ: ವಿಶ್ವ ಮಾರುಕಟ್ಟೆಯಲ್ಲಿ ಭಾರತ ಜಾಗತಿಕವಾಗಿ ಸದೃಢವಾಗುವ ಉದ್ದೇಶದಿಂದ ಉತ್ತರ ಪ್ರದೇಶದ ನೋಯ್ಡಾ ಕೈಗಾರಿಕಾ ಪ್ರದೇಶದಲ್ಲಿ ಬಹು ಮಾದರಿ ಲಾಜಿಸ್ಟಿಕ್ಸ್ ಮತ್ತು ಟ್ರಾನ್ಸ್​ಪೋರ್ಟ್​​ (ಸರಕು-ಸಾರಿಗೆ) ಕೇಂದ್ರವನ್ನು (ಎಂಎಂಟಿಹೆಚ್​​) ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ.

ಇದಲ್ಲದೇ ಸಿಬಿಐಸಿ ಅಡಿ ಕೃಷ್ಣಪಟ್ಟಣಂ ಮತ್ತು ತುಮಕೂರಲ್ಲಿ ಕೈಗಾರಿಕಾ ಕಾರಿಡಾರ್ ನೋಡ್ ಸ್ಥಾಪಿಸುವ ಪ್ರಸ್ತಾಪಕ್ಕೂ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದ್ದಾರೆ.

ಅಲ್ಲದೇ ಈ ಕೇಂದ್ರವು ಅಂದಾಜು 7,725 ಕೋಟಿ ರೂ ವೆಚ್ಚದಲ್ಲಿ ತಯಾರಾಗಲಿದ್ದು, ಸುಮಾರು 2.8 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ಇದರ ಜೊತೆಯಲ್ಲಿ ಸಂಪುಟವು ಹೊಸದಾಗಿ ಎಥೆನಾಲ್​ ಉತ್ಪಾದಿಸುವ ಹೊಸ ಡಿಸ್ಟಿಲರಿಗಳ ನಿರ್ಮಾಣಕ್ಕಾಗಿ 4,573 ಕೋಟಿ ರೂಪಾಯಿ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ತೈಲ ಡೋಪಿಂಗ್​​ ಮಾಡಲು ಬಳಸಬಹುದಾಗಿದೆ ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ತೈಲ ಅಗತ್ಯಗಳನ್ನು ಪೂರೈಸಲು ಆಮದಿನ ಮೇಲಿನ ಅವಲಂಬನೆ ಕಡಿತಗೊಳಿಸುವ ಉದ್ದೇಶದಿಂದ 2030ರ ವೇಳೆಗೆ ಭಾರತಕ್ಕೆ ಪೆಟ್ರೋಲ್ ಡೋಪಿಂಗ್ ಮಾಡಲು ಸುಮಾರು 1,000 ಕೋಟಿ ಲೀಟರ್ ಎಥೆನಾಲ್ ಅಗತ್ಯವಿರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ‘ಆಕಾಶ್ ಕ್ಷಿಪಣಿ’ ರಫ್ತಿಗೆ ಸಂಪುಟ ಅನುಮೋದನೆ

ABOUT THE AUTHOR

...view details