ಕೇರಳ: ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕರ ನೋಂದಣಿ ವಿರುದ್ಧ ನಡೆಯುತ್ತಿದ್ದ ಬೃಹತ್ ಪ್ರತಿಭಟನಾ ರ್ಯಾಲಿ ವೇಳೆ ಬಂದ ಆ್ಯಂಬುಲೆನ್ಸ್ಗೆ ಪ್ರತಿಭಟನಾಕಾರರ ಗುಂಪು ಇಬ್ಭಾಗವಾಗಿ ದಾರಿ ಮಾಡಿಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಿಎಎ ವಿರೋಧಿ ಪ್ರತಿಭಟನೆ ವೇಳೆ ವೇಗವಾಗಿ ಬಂದ ಆ್ಯಂಬುಲೆನ್ಸ್: ಪ್ರತಿಭಟನಾಕಾರರು ಮಾಡಿದ್ದೇನು? - ಕೇರಳದ ಪಲಕ್ಕಾಡ್ ಜಿಲ್ಲೆಯ ಮನ್ನಾರ್ಕಾಡ್ನಲ್ಲಿ ಸಿಎಎ ಹಾಗೂ ಎನ್ಆರ್ಪಿ ವಿರೋಧಿಸಿ ಬೃಹತ್ ರ್ಯಾಲಿ
ಕೇರಳದ ಪಾಲಕ್ಕಾಡ್ ಜಿಲ್ಲೆಯ ಮನ್ನಾರ್ಕಾಡ್ನಲ್ಲಿ ಸಿಎಎ ಹಾಗೂ ಎನ್ಆರ್ಪಿ ವಿರೋಧಿಸಿ ಬೃಹತ್ ರ್ಯಾಲಿ ನಡೆಯುತ್ತಿದ್ದ ವೇಳೆ ಬಂದ ಆ್ಯಂಬುಲೆನ್ಸ್ಗೆ ಆಸ್ಪತ್ರೆ ಮಾರ್ಗದೆಡೆಗೆ ದಾರಿ ಮಾಡಿಕೊಟ್ಟಿರುವ ವಿಡಿಯೋ ವೈರಲ್ ಆಗಿದೆ.

ಸಿಎಎ ವಿರೋಧಿ ರ್ಯಾಲಿ
ರ್ಯಾಲಿ ವೇಳೆ ಆ್ಯಂಬುಲೆನ್ಸ್ಗೆ ದಾರಿ ಮಾಡಿಕೊಟ್ಟ ಪ್ರತಿಭಟನಾಕಾರರು
ಕೇರಳದ ಪಾಲಕ್ಕಾಡ್ ಜಿಲ್ಲೆಯ ಮನ್ನಾರ್ಕಾಡ್ನಲ್ಲಿ ಸಿಎಎ ಹಾಗೂ ಎನ್ಆರ್ಪಿ ವಿರೋಧಿಸಿ ಬೃಹತ್ ರ್ಯಾಲಿ ನಡೆಯುತ್ತಿತ್ತು. ಈ ವೇಳೆ ವ್ಯಕ್ತಿ ಜೀವವನ್ನು ಉಳಿಸುವ ಸಲುವಾಗಿ ಆಸ್ಪತ್ರೆ ಮಾರ್ಗದೆಡೆ ಸಾಗುತ್ತಾ ಬಂದ ಆ್ಯಂಬುಲೆನ್ಸ್ಗೆ ರಸ್ತೆಯನ್ನಾವರಿಸಿ ಪ್ರತಿಭಟಿಸುತ್ತಿದ್ದ ಸಾವಿರಾರು ಜನರ ಗುಂಪು ರಸ್ತೆಯ ಎಡ-ಬಲ ದಿಕ್ಕಿಗೆ ಸರಿದು ದಾರಿ ಮಾಡಿಕೊಟ್ಟಿದ್ದು, ನೆಟ್ಟಿಗರು ಇವರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಟ್ವಿಟರ್ನಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ಸಂಸದ ಶಶಿ ತರೂರ್ ಕೂಡ ರಿಟ್ವೀಟ್ ಮಾಡಿದ್ದಾರೆ.