- ಉತ್ತರ ಪ್ರದೇಶ ಉಪಚುನಾವಣಾ ಫಲಿತಾಂಶ ಬಹಿರಂಗ
- ಏಳು ಸ್ಥಾನಗಳಲ್ಲಿ 6 ಸ್ಥಾನ ಗೆದ್ದು ಬೀಗಿದ ಬಿಜೆಪಿ
- ಒಂದು ಸ್ಥಾನದಲ್ಲಿ ಜಯಗಳಲ್ಲಿ ಸಮಾಜವಾದಿ ಪಕ್ಷ
ಯೋಗಿ ನಾಡಲ್ಲಿ ಅರಳಿದ ಕಮಲ, ಒಂದು ಸ್ಥಾನದಲ್ಲಿ ಎಸ್ಪಿ ಗೆಲುವು..LIVE UPDATES
20:05 November 10
ಯೋಗಿ ನಾಡಲ್ಲಿ ಅರಳಿದ ಕಮಲ
19:10 November 10
ರಘುನಂದನ್ ರಾವ್ಗೆ ಜಯ
- ತೆಲಂಗಾಣದ ದುಬ್ಬಾಕ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಹಿನ್ನೆಲೆ
- ಸಿದ್ಧಿಪೇಟ್ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಚಾರಣೆ
- ದುಬ್ಬಾಕ್ ಕ್ಷೇತ್ರದಿಂದ ಗೆದ್ದ ಬಿಜೆಪಿ ಎಂ.ರಘುನಂದನ್ ರಾವ್
- ಸ್ಥಳದಲ್ಲಿ ಅಪಾರ ಜನಸ್ತೋಮ, ಬಿಜೆಪಿ ಪರ ಜಯಘೋಷ
17:35 November 10
ಗೆಲುವಿನ ಪುನರಾವರ್ತನೆ
- ಭಾರತದ ಜನತಾ ಪಾರ್ಟಿ ಗೆಲುವನ್ನು ಪುನರಾವರ್ತಿಸುತ್ತಿದೆ
- ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆ
- 2017, 2019ರ ಚುನಾವಣೆಗಳಲ್ಲೂ ಇದೇ ರೀತಿ ಗೆಲುವು ಸಾಧಿಸಿತ್ತು
- ಮುಂದಿನ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ
- ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆ
17:27 November 10
''ಬಿಜೆಪಿಯ ಒತ್ತಡದಲ್ಲಿ ಅಧಿಕಾರಿಗಳು ಕೆಲಸ ಮಾಡಿದ್ದಾರೆ''
- ಮಧ್ಯಪ್ರದೇಶದಲ್ಲಿ ತೀವ್ರವಾದ ಇವಿಎಂ ವಿರುದ್ಧದ ಆರೋಪ
- ಕಾಂಗ್ರೆಸ್ ಅಭ್ಯರ್ಥಿ ಪ್ರೇಮ್‌ಚಂದ್ ಗುಡ್ಡು ಬೆಂಬಲಿಗರಿಂದ ಆಕ್ರೋಶ
- ಬಿಜೆಪಿ ಮೇಲೆ ಅಧಿಕಾರ ದುರುಪಯೋಗ ಎಂದು ಆರೋಪ
- ಬಿಜೆಪಿಯ ಒತ್ತಡದಲ್ಲಿ ಅಧಿಕಾರಿಗಳು ಕೆಲಸ ಮಾಡಿದ್ದಾರೆ
- ನಾವು ನ್ಯಾಯಲಯದ ಮೊರೆ ಹೋಗುತ್ತೇವೆ
- ಪ್ರೇಮ್‌ಚಂದ್ ಗುಡ್ಡು ಪುತ್ರ ಅಜಿತ್ ಬೋರಾಸಿ ಹೇಳಿಕೆ
16:40 November 10
ಶಿವರಾಜ್ ಸಿಂಗ್ ಚೌಹಾಣ್ ತಿರುಗೇಟು
- ಈ ಹಿಂದೆ ದಿಗ್ವಿಜಯ್ ಸಿಂಗ್ ಪಕ್ಷ 114 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು
- ಆಗ ದಿಗ್ವಿಜಯ್ ಇವಿಎಂ ವಿಚಾರದಲ್ಲಿ ಯಾವುದೇ ಅಪಸ್ವರ ಎತ್ತಿರಲಿಲ್ಲ
- ಮಧ್ಯಪ್ರದೇಶ ಸಿಎಂ ಶಿವರಾಜ್ಸಿಂಗ್ ಚೌಹಾಣ್ ಅಸಮಾಧಾನ
- ದಿಗ್ವಿಜಯ್ ಸಿಂಗ್ ಯಾವುದೇ ಕಾರಣಕ್ಕೂ ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ
- ದಿಗ್ವಿಜಯ್ ಆರೋಪಕ್ಕೆ ಶಿವರಾಜ್ ಸಿಂಗ್ ಚೌಹಾಣ್ ತಿರುಗೇಟು
16:33 November 10
ಗೆಲುವಿನತ್ತ ಬಿಜೆಪಿ
- ಮಧ್ಯಪ್ರದೇಶದಲ್ಲಿ ಒಂದು ಕ್ಷೇತ್ರದಲ್ಲಿ ಜಯಗಳಿಸಿದ ಬಿಜೆಪಿ
- ಒಟ್ಟು 28 ಕ್ಷೇತ್ರಗಳಲ್ಲಿ 19ರಲ್ಲಿ ಮುನ್ನಡೆ ಸಾಧಿಸಿದ ಬಿಜೆಪಿ
- ಕಾಂಗ್ರೆಸ್ ಪಕ್ಷ 7, ಬಿಎಸ್ಪಿ 1 ಕ್ಷೇತ್ರದಲ್ಲಿ ಮುನ್ನಡೆ
15:52 November 10
ಇವಿಎಂಗಳು ಟ್ಯಾಂಪರ್ ಪ್ರೂಫ್ ಅಲ್ಲ
- ಈಗ ಚುನಾವಣೆಗೆ ಬಳಸಿರುವ ಇವಿಎಂಗಳು ಟ್ಯಾಂಪರ್ ಪ್ರೂಫ್ ಅಲ್ಲ
- ಕೆಲವೊಂದು ಇವಿಎಂಗಳಿಗೆ ಮಾತ್ರ ಟ್ಯಾಂಪರ್ ಮಾಡಲಾಗಿದೆ
- ಮಧ್ಯಪ್ರದೇಶದ ಚುನಾವಣಾ ಫಲಿತಾಂಶದ ಬಗ್ಗೆ ದಿಗ್ವಿಜಯ್ ಸಿಂಗ್ ಆರೋಪ
- ಹೀಗಿದ್ದರೂ ನಾವು ಕೆಲವೊಂದು ಸ್ಥಾನಗಳಲ್ಲಿ ಗೆದ್ದೇ ಗೆಲ್ಲುತ್ತೇವೆ
- ನಾಳೆ ಸಭೆ ನಡೆಸಿ ಫಲಿತಾಂಶವನ್ನು ವಿಶ್ಲೇಷಣೆ ಮಾಡುತ್ತೇವೆ
- ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಹೇಳಿಕೆ
15:32 November 10
ಬಿಜೆಪಿ ಸಂಭ್ರಮಾಚರಣೆ
- ಗುಜರಾತ್ ಉಪ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ
- ಗುಜರಾತ್ನಲ್ಲಿ 8 ಕ್ಷೇತ್ರಗಳಲ್ಲಿ 7ರಲ್ಲಿ ಬಿಜೆಪಿ ಮುನ್ನಡೆ
- ಕಾರ್ಯಕರ್ತರೊಂದಿಗೆ ಸಿಎಂ ವಿಜಯ್ ರೂಪಾನಿ ಸಂಭ್ರಮ
- ಬಿಜೆಪಿ ಕಚೇರಿ ಕಮಲಂನಲ್ಲಿ ವಿಜಯ್ ರೂಪಾನಿ ಸಂಭ್ರಮ
- ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿರುವ ಬಿಜೆಪಿ
15:05 November 10
ಬಿಜೆಪಿ ಸಂಭ್ರಮಾಚರಣೆ
- ಮಧ್ಯ ಪ್ರದೇಶದ ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಹಿನ್ನೆಲೆ
- ಪಕ್ಷದ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
- ಇಂಧೋರ್ನ ಬಿಜೆಪಿ ಪಕ್ಷದ ಕಚೇರಿ ಮುಂದೆ ಕಾರ್ಯಕರ್ತರ ಸಂಭ್ರಮ
14:19 November 10
ಬೈ ಎಲೆಕ್ಷನ್ನಲ್ಲಿ ಬಿಜೆಪಿ ಕಮಾಲ್, 30ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ
- 10 ರಾಜ್ಯದ 58 ಸ್ಥಾನಗಳಲ್ಲಿ ಬಿಜೆಪಿ 30ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ
- ಮಧ್ಯಪ್ರದೇಶದಲ್ಲಿ 20 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
- 7 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ 1ರಲ್ಲಿ ಬಿಎಸ್ಪಿ ಮುನ್ನಡೆ
- ಮಣಿಪುರದಲ್ಲಿ 4 ಸ್ಥಾನದಲ್ಲಿ ಬಿಜೆಪಿ ಮುನ್ನಡೆ, ಇತರೆ 1 ಕ್ಷೇತ್ರದಲ್ಲಿ ಮುನ್ನಡೆ
- ಉತ್ತರ ಪ್ರದೇಶದಲ್ಲಿ 6 ಸ್ಥಾನದಲ್ಲಿ ಬಿಜೆಪಿ, ಎಸ್ಪಿ 1 ಸ್ಥಾನದಲ್ಲಿ ಮುನ್ನಡೆ
- ಕರ್ನಾಟಕದ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
- ಗುಜರಾತ್ನಲ್ಲಿ 8 ಸ್ಥಾನಗಳಲ್ಲೂ ಬಿಜೆಪಿ ಮುನ್ನಡೆ
10:16 November 10
ಉಪ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ, ಮಣಿಪುರದಲ್ಲಿ 1 ಸ್ಥಾನದಲ್ಲಿ ಬಿಜೆಪಿ ಗೆಲುವು
- 10 ರಾಜ್ಯಗಳ ವಿಧಾನಸಭಾ ಉಪಚುನಾವಣೆ: 58 ಕ್ಷೇತ್ರ
- ಮಧ್ಯಪ್ರದೇಶ: 28 ಕ್ಷೇತ್ರಗಳ ಪೈಕಿ ಬಿಜೆಪಿ 18, ಕಾಂಗ್ರೆಸ್ 7, ಬಿಎಸ್ಪಿ 2)
- ಗುಜರಾತ್: 8 (ಬಿಜೆಪಿ 7 ಕ್ಷೇತ್ರ) ಮುನ್ನಡೆ
- ಉತ್ತರ ಪ್ರದೇಶ: 7 ಕ್ಷೇತ್ರಗಳ ಪೈಕಿ ಬಿಜೆಪಿ 5, ಎಸ್ಪಿ 2 ಕ್ಷೇತ್ರದಲ್ಲಿ ಮುನ್ನಡೆ
- ಮಣಿಪುರದಲ್ಲಿ 1 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ
- ಒಡಿಶಾ: 2ಕ್ಷೇತ್ರಗಳ ಪೈಕಿ ಬಿಜೆಡಿ 1ರಲ್ಲಿ ಮುನ್ನಡೆ
09:54 November 10
ಮಧ್ಯಪ್ರದೇಶದಲ್ಲಿ ಬಿಜೆಪಿ 18 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ
- ಮಧ್ಯಪ್ರದೇಶದಲ್ಲಿ ಬಿಜೆಪಿ 18, ಕಾಂಗ್ರೆಸ್ 08, ಬಿಎಸ್ಪಿ 2 ಕ್ಷೇತ್ರಗಳಲ್ಲಿ ಮುನ್ನಡೆ
- ಉತ್ತರ ಪ್ರದೇಶದಲ್ಲಿ ಬಿಜೆಪಿ 05, ಎಸ್ಪಿ 1 ಸ್ಥಾನದಲ್ಲಿ ಮುನ್ನಡೆ
- ಮಣಿಪುರದಲ್ಲಿ ಬಿಜೆಪಿ 1 ಕ್ಷೇತ್ರಗಳಲ್ಲಿ ಮುನ್ನಡೆ
- ಗುಹಜರಾತ್ನಲ್ಲಿ 5 ಬಿಜೆಪಿ, 7 ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ
09:26 November 10
ಮಧ್ಯಪ್ರದೇಶದಲ್ಲಿ ಬಿಜೆಪಿ 16, ಕಾಂಗ್ರೆಸ್ 7 ಸ್ಥಾನಗಳಲ್ಲಿ ಮುನ್ನಡೆ
- ಮಧ್ಯಪ್ರದೇಶದಲ್ಲಿ ಬಿಜೆಪಿ 16, ಕಾಂಗ್ರೆಸ್ 7 ಸ್ಥಾನಗಳಲ್ಲಿ ಮುನ್ನಡೆ
- ಗುಜರಾತ್ನಲ್ಲಿ 5 ಕ್ಷೇತ್ರಗಳಲ್ಲಿ ಮುನ್ನಡೆ
- ಛತ್ತೀಸಗಢದಲ್ಲಿ ಕಾಂಗ್ರೆಸ್ 1ಕ್ಷೇತ್ರದಲ್ಲಿ ಮುನ್ನಡೆ
- ಮಣಿಪುರದಲ್ಲಿ ಬಿಜೆಪಿ 1 ಕ್ಷೇತ್ರದಲ್ಲಿ ಮುನ್ನಡೆ
- ಉತ್ತರಪ್ರದೇಶದಲ್ಲಿ ಬಿಜೆಪಿ 4 ಕ್ಷೇತ್ರದಲ್ಲಿ ಮುನ್ನಡೆ
09:04 November 10
ಮಧ್ಯಪ್ರದೇಶದಲ್ಲಿ ಬಿಜೆಪಿ 3 ಕ್ಷೇತ್ರ, ಉತ್ತರ ಪ್ರದೇಶದಲ್ಲಿ bಇಜೆಪಿ 1 ಕ್ಷೇತ್ರಗಳಲ್ಲಿ ಮುನ್ನಡೆ
ಮಧ್ಯಪ್ರದೇಶದಲ್ಲಿ ಬಿಜೆಪಿ 3 ಕ್ಷೇತ್ರ, ಉತ್ತರ ಪ್ರದೇಶದಲ್ಲಿ ಬಿಜೆಪಿ 1 ಕ್ಷೇತ್ರಗಳಲ್ಲಿ ಮುನ್ನಡೆ
07:49 November 10
ವಿವಿಧ ರಾಜ್ಯಗಳ ಉಪಚುನಾವಣೆ: ಮಧ್ಯಪ್ರದೇಶ ಸೇರಿ 10 ರಾಜ್ಯಗಳಲ್ಲಿ ಮತ ಎಣಿಕೆ ಆರಂಭ
ಮಧ್ಯಪ್ರದೇಶದ 28 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಆರಂಭ
10 ರಾಜ್ಯಗಳಲ್ಲಿ ಮತ ಎಣಿಕೆ ಕಾರ್ಯ ಆರಂಭ
58 ಕ್ಷೇತ್ರಗಳ ಬೈಎಲೆಕ್ಷನ್ ಫಲಿತಾಂಶ, ಮಧ್ಯಪ್ರದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಚುನಾವಣೆ
07:01 November 10
ಮಧ್ಯಪ್ರದೇಶದಲ್ಲಿ ಬಿಜೆಪಿಯ 12 ಸಚಿವರ ಭವಿಷ್ಯ ನಿರ್ಧಾರ
- ಮಧ್ಯಪ್ರದೇಶದಲ್ಲಿ ಬಿಜೆಪಿಯ 12 ಸಚಿವರ ಭವಿಷ್ಯ ನಿರ್ಧಾರ
- ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿರುವ ಮತಎಣಿಕೆ ಕಾರ್ಯ
- ವಿವಿಧ ಸಮೀಕ್ಷೆಗಳ ಪ್ರಕಾರ ಬಿಜೆಪಿ 16ರಿಂದ 18 ಕ್ಷೇತ್ರಗಳಲ್ಲಿ ಗೆಲುವು
06:44 November 10
ಮಧ್ಯಪ್ರದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಉಪಚುನಾವಣೆ ಫಲಿತಾಂಶ
ಹೈದರಾಬಾದ್: ಬಿಹಾರ ವಿಧಾನಸಭೆ ಫಲಿತಾಂಶದ ಜತೆಗೆ ಇಂದು ವಿವಿಧ ರಾಜ್ಯಗಳ 58 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಬಹಿರಂಗಗೊಳ್ಳಲಿದೆ. ಪ್ರಮುಖವಾಗಿ ಮಧ್ಯಪ್ರದೇಶದ 28 ಕ್ಷೇತ್ರಗಳು, ಗುಜರಾತ್ನ 8 ಸ್ಥಾನ, ಉತ್ತರ ಪ್ರದೇಶದ 7 ಕ್ಷೇತ್ರ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿವೆ.
ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರ ಮುಖ್ಯಮಂತ್ರಿ ಸ್ಥಾನದ ಭವಿಷ್ಯ ಕೂಡ ಇಂದಿನ ಉಪ ಚುನಾವಣೆ ಫಲಿತಾಂಶದಿಂದ ನಿರ್ಧಾರಗೊಳ್ಳಲಿದೆ. ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ನಡೆಸಿದ್ದ ಬಿಜೆಪಿ, ಕಾಂಗ್ರೆಸ್ನ ಕೆಲ ಶಾಸಕರನ್ನ ತನ್ನತ್ತ ಸೆಳೆದುಕೊಳ್ಳಲು ಯಶಸ್ವಿಯಾಗಿತ್ತು.
ಯಾವ ರಾಜ್ಯಗಳಲ್ಲಿ ಎಷ್ಟು ಕ್ಷೇತ್ರಗಳು?
- ಗುಜರಾತ್ 8 ಕ್ಷೇತ್ರ
- ಹರಿಯಾಣ 1ಕ್ಷೇತ್ರ
- ಜಾರ್ಖಂಡ್ 2ಕ್ಷೇತ್ರ
- ಕರ್ನಾಟಕ 2 ಕ್ಷೇತ್ರ
- ಮಧ್ಯಪ್ರದೇಶ 28ಕ್ಷೇತ್ರ
- ನಾಗಾಲ್ಯಾಂಡ್ 2ಕ್ಷೇತ್ರ
- ಒಡಿಶಾ 2ಕ್ಷೇತ್ರ
- ತೆಲಂಗಾಣ 1ಕ್ಷೇತ್ರ
- ಉತ್ತರ ಪ್ರದೇಶ 7 ಕ್ಷೇತ್ರ
- ಛತ್ತೀಸ್‌ಗಢ 1ಕ್ಷೇತ್ರ