ಮ್ಯಾಡ್ರಿಡ್(ಸ್ಪೇನ್) :ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮೊಬೈಲ್ ಬಿಟ್ಟು ಒಂದು ನಿಮಿಷವೂ ಇರಲು ಇಷ್ಟಪಡುವುದಿಲ್ಲ. ಕೆಲವೊಮ್ಮೆ ಅತಿಯಾದ ಮೊಬೈಲ್ ಸಹವಾಸ ಪ್ರಾಣಕ್ಕೂ ಕುತ್ತು ತರಬಲ್ಲದು ಎಂಬ ಸಂಗತಿಯೂ ಅವರ ಗಮನಕ್ಕೆ ಬರಲ್ಲ. ಇದಕ್ಕೆ ನಿದರ್ಶನ ಎಂಬಂತೆ ಮ್ಯಾಡ್ರಿಡ್ ಮೆಟ್ರೋ ರೈಲ್ವೆ ಸ್ಟೇಷನ್ನಲ್ಲಿ ಘಟನೆ ನಡೆದಿದೆ.
ಇದು ಅಕ್ಟೋಬರ್ 24ರಂದು ನಡೆದ ಘಟನೆ. ಇದರ ಸಿಸಿಟಿವಿ ದೃಶ್ಯಾವಳಿ ಇದೀಗ ವೈರಲ್ ಆಗಿದೆ.
ಮೊಬೈಲ್ನಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದ ಯುವತಿ ರೈಲ್ವೇ ಪ್ಲಾಟ್ ಫಾರ್ಮ್ನಿಂದ ಹಿಂದೆ ಮುಂದೆ ನೋಡದೆ ಟ್ರ್ಯಾಕ್ನತ್ತ ನಡೆದುಕೊಂಡು ಹೋಗಿದ್ದಾಳೆ. ಈ ವೇಳೆ ಸಮತೋಲನ ಕಳೆದುಕೊಂಡ ಆಕೆ ಸೀದಾ ಮುಗ್ಗರಿಸಿ ಟ್ರ್ಯಾಕ್ ಮೇಲೆ ಬಿದ್ದಿದ್ದಾಳೆ. ತಕ್ಷಣವೇ ಅದೇ ಟ್ರ್ಯಾಕ್ ಮೇಲೆ ಮೆಟ್ರೋ ರೈಲು ಬಂದಿದೆ.
ಸುದೈವವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂಬ ವಿಚಾರ ಗೊತ್ತಾಗಿದೆ. ಇದೀಗ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು ನೋಡುಗರ ಹೃದಯ ಬಡಿತದಲ್ಲಿ ಏರಿಳಿತ ಆಗುವುದರಲ್ಲಿ ಸಂಶಯವಿಲ್ಲ. ಈ ಹಿಂದೆಯೂ ಇಂತಹ ದುರ್ಘಟನೆಗಳು ನಡೆದಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದರು.