ನವದೆಹಲಿ: ಬಸ್ ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ಸೊಂದು ನೀತಿ ಆಯೋಗದ ಕಚೇರಿಗೆ ನುಗ್ಗಿರುವ ಘಟನೆ ನಗರದಲ್ಲಿ ನಡೆದಿದೆ.
ನೀತಿ ಆಯೋಗ ಕಚೇರಿಗೆ ನುಗ್ಗಿದ ಸರ್ಕಾರಿ ಬಸ್... ಚಾಲಕ ಗಂಭೀರ! - ದೆಹಲಿ ನೀತಿ ಆಯೋಗ ಕಚೇರಿ ಸುದ್ದಿ
ಸರ್ಕಾರಿ ಬಸ್ಸೊಂದು ನೀತಿ ಆಯೋಗದ ಕಚೇರಿಯ ಕಾಂಪೌಂಡ್ಗೆ ಡಿಕ್ಕಿ ಹೊಡೆದು ಒಳಗೆ ನುಗ್ಗಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ನೀತಿ ಆಯೋಗ ಕಚೇರಿಗೆ ನುಗ್ಗಿದ ಸರ್ಕಾರಿ ಬಸ್
ತಡರಾತ್ರಿ ಬಸ್ ನಿಯಂತ್ರಣ ತಪ್ಪಿ ನೀತಿ ಆಯೋಗ ಕಚೇರಿಯ ಕಾಂಪೌಂಡ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾಂಪೌಂಡ್ ಕುಸಿದು ಬಿದ್ದಿದೆ.
ಈ ಅಪಘಾತದಲ್ಲಿ ಚಾಲಕನಿಗೆ ಗಂಭೀರವಾಗಿ ಗಾಯವಾಗಿದ್ದು, ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
Last Updated : Sep 4, 2020, 8:00 AM IST