ನೋಯ್ಡಾ:ಇಲ್ಲಿನ ಗೌತಮ್ ಬುದ್ಧ ನಗರದ ಪೊಲೀಸರು ಬಸ್ ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲ ಎನ್ನುವ ಕಾರಣ ನೀಡಿ ಐನೂರು ರೂ. ದಂಡ ವಿಧಿಸಿದ್ದಾರೆ.
ನಿರಂಕರ್ ಸಿಂಗ್ ಎನ್ನುವಾತ ಬಸ್ ಮಾಲೀಕನಾಗಿದ್ದು, ಶಾಲೆ ಹಾಗೂ ಕಚೇರಿಗಳಿಗೆ ನೋಯ್ಡಾ, ಗ್ರೇಟರ್ ನೋಯ್ಡಾ ಹಾಗೂ ಗಾಜಿಯಾಬಾದ್ ಪ್ರದೇಶಗಳಲ್ಲಿ ಬಸ್ಸನ್ನು ಬಾಡಿಗೆಗೆ ನೀಡುತ್ತಿದ್ದಾರೆ.
ಲೈಸನ್ಸ್ ಇಲ್ಲ, ಓವರ್ ಲೋಡ್ ಹಿನ್ನೆಲೆ... ಟ್ರಕ್ ಚಾಲಕನಿಗೆ ದೇಶದಲ್ಲೇ ಗರಿಷ್ಠ ದಂಡ..!
ದಂಡದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಸ್ ಮಾಲೀಕ ನಿರಂಕರ್ ಸಿಂಗ್, ನಾವು 80ಕ್ಕೂ ಅಧಿಕ ಬಸ್ಗಳನ್ನು ಹೊಂದಿದ್ದೇವೆ. ಬಸ್ ಚಾಲನೆ ವೇಳೆ ಹೆಲ್ಮೆಟ್ ಧರಿಸಿಲ್ಲ ಎನ್ನುವ ಕಾರಣ ನೀಡಿ ದಂಡ ವಿಧಿಸಿದ್ದು ನಿಜಕ್ಕೂ ಅಚ್ಚರಿ ತಂದಿದೆ ಎಂದಿದ್ದಾರೆ.
ಸದ್ಯ ಆಗಿರುವ ಪ್ರಮಾದವನ್ನು ಪರಿಶೀಲನೆ ಮಾಡಲಾಗುವುದು ಎಂದಿರುವ ಎಸ್ಪಿ ಅನಿಲ್ ಕುಮಾರ್ ಝಾ, ಬಸ್ ಮಾಲೀಕರು ಈಗಾಗಲೇ ನಾಲ್ಕು ದಂಡವನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.