ಬನಸ್ಕಂಟ(ಗುಜರಾತ್):ಸುಮಾರು 50 ಪ್ರಯಾಣಿಕರಿದ್ದ ಖಾಸಗಿ ಬಸ್‌ವೊಂದು ಕಂದಕಕ್ಕೆ ಉರುಳಿದ ಪರಿಣಾಮ ಸುಮಾರು ಹದಿನೆಂಟು ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಕಂದಕಕ್ಕೆ ಉರುಳಿದ ಖಾಸಗಿ ಬಸ್ ಗುಜರಾತ್ನ ಬನಸ್ಕಂಟ ಜಿಲ್ಲೆಯ ಅಂಬಾಜಿ ನಗರದಲ್ಲಿ ಬಸ್ ದುರಂತ ನಡೆದಿದೆ. ಘಟನಾ ಸ್ಥಳಕ್ಕೆ ಆ್ಯಂಬುಲೆನ್ಸ್ ಆಗಮಿಸಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆಸಲಾಗಿದೆ.
ಹತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಸದ್ಯ ರಕ್ಷಣಾ ಕಾರ್ಯಕ್ಕೆ ಸ್ಥಳೀಯರು ಕೈಜೋಡಿಸಿದ್ದಾರೆ.
ಪ್ರಧಾನಿ ಮೋದಿ, ಅಮಿತ್ ಶಾ ಸಂತಾಪ:
ಗುಜರಾತ್ನಲ್ಲಿ ನಡೆದ ಬಸ್ ದುರಂತಕ್ಕೆ ಪ್ರಧಾನಿ ಮೋದಿ ಹಅಗೂ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.
ಬನಸ್ಕಂಟದ ಸುದ್ದಿ ಕೇಳಿ ಅತ್ಯಂತ ನೋವಾಯಿತು. ಸಾವು-ನೋವು ಉಂಟಾದ ಎಲ್ಲರಿಗೂ ಆ ದೇವರು ಶಕ್ತಿ ತುಂಬಲಿ. ಗಾಯಾಗಳು ಶೀಘ್ರ ಗುಣಮುಖರಾಗಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಗುಜರಾತ್ನ ಬಸ್ ದುರಂತದ ವಿಚಾರ ತಿಳಿದು ದುಃಖಗೊಂಡಿದ್ದೇನೆ. ರಾಜ್ಯ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅಲ್ಲಿನ ಅಧಿಕಾರಿಗಳು ರಕ್ಷಣೆಯಲ್ಲಿ ಭಾಗಿಯಾಗಿದ್ದಾರೆ. ಗಾಯಗೊಂಡಿರುವವರು ಬೇಗ ಗುಣಮುಖರಾಗಲಿ ಎಂದು ಗೃಹಸಚಿವ ಅಮಿತ್ ಶಾ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.