ಲಖನೌ ( ಉತ್ತರ ಪ್ರದೇಶ) :ಹಣದ ವಿಚಾರಕ್ಕೆ ಸಂಬಂದಪಟ್ಟಂತೆ ಫೈನಾನ್ಸ್ ಕಂಪನಿಯವರು 34 ಪ್ರಯಾಣಿಕರ ಸಹಿತ ಬಸ್ ಅಕ್ರಮವಾಗಿ ವಶಪಡಿಸಿಕೊಂಡ ಘಟನೆ ಆಗ್ರಾದಲ್ಲಿ ನಡೆದಿದೆ.
ಗುರುಗಾಂವ್ನಿಂದ ಪನ್ನಾಗೆ ತೆರಳುತ್ತಿದ್ದ ಬಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಆರಂಭದಲ್ಲಿ ಬಸ್ ಅಪಹರಿಸಲಾಗಿದೆ ಎಂದು ಸುದ್ದಿಯಾಗಿತ್ತು.
ಈ ಕುರಿತು ಸ್ಪಷ್ಟನೆ ನೀಡಿರುವ ಆಗ್ರಾ ಎಸ್ಪಿಬಬ್ಲು ಸಿಂಗ್, ಗುರುಗಾಂವ್ನಿಂದ ಪನ್ನಾಗೆ ತೆರಳುತ್ತಿದ್ದ ಬಸ್ ಅನ್ನು ಫೈನಾನ್ಸ್ ಕಂಪನಿಯವರು ಚೇಸ್ ಮಾಡಿ ಅಕ್ರಮವಾಗಿ ವಶಪಡಿಸಿಕೊಂಡಿರುವುದಾಗಿ ಗ್ವಾಲಿಯರ್ನ ಮೂವರು ಬಂದು ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಬಸ್ ನಿರ್ವಾಹಕ ರಾಮ್ ವಿಶಾಲ್ ಪಟೇಲ್ ಹಣಕಾಸು ಕಂಪನಿ ಅಕ್ರಮವಾಗಿ ಬಸ್ ವಶಪಡಿಸಿಕೊಂಡಿದೆ. ಚಾಲಕ ಮತ್ತು ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಬಸ್‌ನ ಮಾಲೀಕರು ನಿನ್ನೆ ಮೃತಪಟ್ಟಿದ್ದರು ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಅವಸ್ಥಿ ತಿಳಿಸಿದ್ದಾರೆ.