ಶ್ರೀನಗರ (ಜಮ್ಮು ಕಾಶ್ಮೀರ):ಶ್ರೀನಗರದ ಖನ್ಯಾರ್ ಪ್ರದೇಶದ ಪ್ರಸಿದ್ಧ ದರ್ಗಾದೊಳಗೆ ನುಗ್ಗಿದ ಕಳ್ಳನೊಬ್ಬ, ದೇಣಿಗೆ ಪೆಟ್ಟಿಗೆಯನ್ನು ಒಡೆಯಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಗರದ ಪ್ರಸಿದ್ಧ ದರ್ಗಾದಲ್ಲಿ ಕಳ್ಳತನಕ್ಕೆ ಯತ್ನ..! - shrine in Srinagar city
ಶ್ರೀನಗರದ ಪ್ರಸಿದ್ಧ ದಸ್ತಗೀರ್ ಸಹಾಬ್ ದರ್ಗಾದೊಳಗೆ ನುಗ್ಗಿದ ಕಳ್ಳನೊಬ್ಬ, ದೇಣಿಗೆ ಪೆಟ್ಟಿಗೆಯನ್ನು ಒಡೆಯಲು ಪ್ರಯತ್ನಿಸಿದ್ದಾರೆ.

ಶ್ರೀನಗರದ ಪ್ರಸಿದ್ಧ ದರ್ಗಾ ಕಳ್ಳತನಕ್ಕೆ ಯತ್ನ
ನಿನ್ನೆ ಮಧ್ಯರಾತ್ರಿಯಲ್ಲಿ ದಸ್ತಗೀರ್ ಸಹಾಬ್ ದರ್ಗಾದ ಈ ಘಟನೆ ನಡೆದಿದ್ದು, ಖನ್ಯಾರ್‌ನ 'ಇಂಟಿಜಾಮಿಯಾ' ಸಮಿತಿಯು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆಗಾಗಿ ಖನ್ಯಾರ್ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಖದೀಮನ ಪತ್ತೆಗೆ ಖಾಕಿ ಬಲೆ ಬೀಸಿದೆ.