ಡೆಹ್ರಾಡೂನ್:ದೇಶದಲ್ಲಿ ಮೋಟಾರ್ ವಾಹನ ಕಾಯ್ದೆ ಜಾರಿ ಆದಾಗಿನಿಂದ ವಾಹನ ಸವಾರರಿಗೆ ಭಾರೀ ಪ್ರಮಾಣದ ದಂಡ ವಿಧಿಸಿರುವುದನ್ನು ವರದಿಯಾಗಿವೆ. ಆದರೆ ಉತ್ತರಾಖಂಡ ಟ್ರಾಫಿಕ್ ಪೊಲೀಸರು ಎತ್ತಿನಗಾಡಿಗೂ ಕೂಡ ದಂಡ ವಿಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಮೋಟಾರ್ ವಾಹನ ಕಾಯ್ದೆ... ಎತ್ತಿನಗಾಡಿಗೂ ದಂಡ ವಿಧಿಸಿದ ಪೊಲೀಸರು! - Motor Vehicle act
ಮೋಟಾರ್ ವಾಹನ ಕಾಯ್ದೆ ಅಡಿ ಎತ್ತಿನ ಗಾಡಿಗೂ ಕೂಡ ದಂಡ ವಿಧಿಸಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ನದಿ ತೀರವೊಂದರಲ್ಲಿ ಎತ್ತಿನ ಬಂಡಿಯೊಂದು ಕಂಡಿದೆ. ರೈತನೋರ್ವನಿಗೆ ಸೇರಿದ್ದ ಈ ಎತ್ತಿನಬಂಡಿಗೆ ಪೊಲೀಸರು ಒಂದು ಸಾವಿರ ರೂ. ದಂಡ ವಿಧಿಸಿ ಚಲನ್ ನೀಡಿದ್ದಾರೆ. ಆದರೆ ಈ ಎತ್ತಿನ ಬಂಡಿಗೆ ದಂಡ ವಿಧಿಸಿದ್ದಲ್ಲದೆ, ಅದರ ಮೇಲೆ ತಾನು ಇರಿಸಿದ್ದ ಸಾಮಾನುಗಳನ್ನೂ ಕೂಡ ತೆಗೆದು ಎಸೆಯಲಾಗಿದೆ ಎಂದು ರೈತ ಆರೋಪಿಸಿದ್ದಾನೆ.
ಇನ್ನು ಮೋಟಾರ್ ವಾಹನ ಕಾಯ್ದೆಯು ಎತ್ತಿನಗಾಡಿಗೂ ಕೂಡ ಅನ್ವಯವಾಗುವ ರೀತಿಯಲ್ಲಿ ದಂಡ ವಿಧಿಸಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಬೈ ಮಿಸ್ಟೇಕ್ ಚಲನ್ ನೀಡಲಾಗಿದ್ದು, ಬಳಿಕ ದಂಡವನ್ನು ರದ್ದುಗೊಳಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.