ಕರ್ನಾಟಕ

karnataka

ETV Bharat / bharat

ಬಸವನ ಹುಳುವಂತೆ ತೆವಳುತ್ತಿರುವ ಬುಲೆಟ್‌ ರೈಲು ಯೋಜನೆ - ಬುಲೆಟ್‌ ರೈಲು ಯೋಜನೆ ನ್ಯೂಸ್​

ಬುಲೆಟ್ ರೈಲುಗಳು ಪ್ರಸ್ತುತ ಜಪಾನ್, ಚೀನಾ ಮತ್ತು ಬ್ರಿಟನ್ ಅನ್ನು ಒಳಗೊಂಡಂತೆ ವಿಶ್ವದಾದ್ಯಂತ 20 ದೇಶಗಳಲ್ಲಿ ಓಡುತ್ತಿವೆ. ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿರುವ ಭಾರತದಲ್ಲಿ, ಈ ಹೈಸ್ಪೀಡ್ ರೈಲು ಇನ್ನೂ ಬಂದಿಲ್ಲ. ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಮೂರು ವರ್ಷಗಳ ಹಿಂದೆ ಅಡಿಪಾಯ ಹಾಕಲಾಗಿದ್ದರೂ ಭೂಸ್ವಾಧೀನದಂತಹ ಉದಯೋನ್ಮುಖ ಸಮಸ್ಯೆಗಳನ್ನು ನಿವಾರಿಸಿ ಹೊರಬರಲು ಸಾಧ್ಯವಾಗಲಿಲ್ಲ..

Bullet Train Project in slow proses
ಬಸವನ ಹುಳುವಂತೆ ತೆವಳುತ್ತಿರುವ ಬುಲೆಟ್‌ ರೈಲು ಯೋಜನೆ

By

Published : Oct 5, 2020, 4:37 PM IST

ಭಾರತದಲ್ಲಿ ಯೋಜನೆಗಳಿಗೆ ಉದಯೋನ್ಮುಖ ತೊಡಕುಗಳು

ಕಾಲ-ಕಾಲಕ್ಕೆ ತಕ್ಕಂತೆ ನಾವೆಲ್ಲರೂ ಬದಲಾಗಬೇಕು. ಬದಲಾವಣೆ ತಕ್ಕಂತೆ ನಾವು ಆಧುನಿಕ ತಂತ್ರಜ್ಞಾನದ ನವೀಕರಣಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಾವು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಎದುರಿಸಲಾಗದೆ ನಾವು ಹಿಂದುಳಿಯುತ್ತೇವೆ. ಸದ್ಯ, ಬುಲೆಟ್ ರೈಲುಗಳು ಪ್ರಸ್ತುತ ಜಪಾನ್, ಚೀನಾ ಮತ್ತು ಬ್ರಿಟನ್ ಅನ್ನು ಒಳಗೊಂಡಂತೆ ವಿಶ್ವದಾದ್ಯಂತ 20 ದೇಶಗಳಲ್ಲಿ ಓಡುತ್ತಿವೆ. ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿರುವ ಭಾರತದಲ್ಲಿ, ಈ ಹೈಸ್ಪೀಡ್ ರೈಲು ಇನ್ನೂ ಬಂದಿಲ್ಲ. ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಮೂರು ವರ್ಷಗಳ ಹಿಂದೆ ಅಡಿಪಾಯ ಹಾಕಲಾಗಿದ್ದರೂ, ಭೂಸ್ವಾಧೀನದಂತಹ ಉದಯೋನ್ಮುಖ ಸಮಸ್ಯೆಗಳನ್ನು ನಿವಾರಿಸಿ ಹೊರಬರಲು ಸಾಧ್ಯವಾಗಲಿಲ್ಲ.

ಇದರ ಜೊತೆಗೆ, ಕೇಂದ್ರ ಸರ್ಕಾರವು ಇನ್ನೂ ಏಳು ಹೊಸ ಬುಲೆಟ್‌ ರೈಲು ಪ್ರಾರಂಭಿಸುವ ಯೋಜನೆಗಳನ್ನ ಹೊಂದಿದೆ. ದೇಶದ ಆರ್ಥಿಕ ರಾಜಧಾನಿಯಾದ ಮುಂಬೈಯನ್ನು ಹೈದರಾಬಾದ್‌ನೊಂದಿಗೆ ಸಂಪರ್ಕಿಸುವ ಕಾರಿಡಾರ್ ಅವುಗಳಲ್ಲಿ ಒಂದು. ಹೊಸ ಯೋಜನೆಗಳನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುವುದು ಸಂತೋಷಕರವಾದರೂ, ಆರಂಭದಲ್ಲಿ ಕೈಗೊಳ್ಳಲಾದ ಮಹತ್ವಾಕಾಂಕ್ಷೆಯ ಯೋಜನಾ ಕಾರ್ಯದಲ್ಲಿ ಯಾವುದೇ ಪ್ರಗತಿ ಸಾಧಿಸಲಾಗಿಲ್ಲ ಎಂಬುದು ಆತಂಕಕಾರಿ ಸಂಗತಿಯಾಗಿದೆ.

ಜಪಾನ್ -ಬುಲೆಟ್ ರೈಲಿಗೆ ಸೂಕ್ತ ಉದಾಹರಣೆ :ವಿಶ್ವದ ಮೊದಲ ಬುಲೆಟ್ ರೈಲು ಉಡಾವಣೆ ಮಾಡಿದ ಮೊದಲ ದೇಶ ಜಪಾನ್. 1964 ರಲ್ಲಿಯೇ ಟೋಕಿಯೊ ಮತ್ತು ಒಸಾಕಾ ನಗರಗಳನ್ನು ಸಂಪರ್ಕಿಸುವ ಹೈಸ್ಪೀಡ್ ರೈಲು ಸೇವೆಗಳು ಪ್ರಾರಂಭವಾದವು. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಮತ್ತು ಚೀನಾ ನಂತರ ಜಪಾನ್ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲು ಬುಲೆಟ್ ರೈಲು ವ್ಯವಸ್ಥೆಯು ಒಂದು ಪ್ರಮುಖ ಕಾರಣವಾಗಿದೆ. ಆದಾಗ್ಯೂ, ಎರಡನೆಯ ಮಹಾಯುದ್ಧದ ಆರಂಭದೊಂದಿಗೆ, ಜಪಾನ್‌ನ ಆರ್ಥಿಕತೆಯು ಕುಸಿಯಿತು! ಅಂದಿನಿಂದ, ಸರ್ಕಾರ ಮತ್ತು ಜನರು ಒಟ್ಟಾಗಿ ಸಮೃದ್ಧಿಯನ್ನು ಮತ್ತೆ ಹಾದಿಗೆ ತರಲು ಶ್ರಮಿಸಿದ್ದಾರೆ. ದೇಶದಲ್ಲಿ ಸಮಗ್ರ ಬೆಳವಣಿಗೆಯನ್ನು ಸಾಧಿಸುವ ಗುರಿಯನ್ನು ಹೊಂದಿರುವ ಜಪಾನ್ ಬುಲೆಟ್ ರೈಲು ಯೋಜನೆಗಳನ್ನು ಕೈಗೊಂಡಿದೆ.

ಇದು ದೇಶದ ವ್ಯಾಪಾರ ವಲಯ ಮತ್ತು ರಾಷ್ಟ್ರದ ಆರ್ಥಿಕ ಸ್ಥಿತಿಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಪ್ರಯಾಣದ ಸಮಯವು ಉತ್ಪಾದಕತೆಯ ಸಮಯವನ್ನು ಹೆಚ್ಚಿಸುವುದರಿಂದ ಕೈಗಾರಿಕೆಗಳು ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಮರ್ಥವಾಗಿವೆ. ಪ್ರವಾಸೋದ್ಯಮ ಕ್ಷೇತ್ರವೂ ಸಹ ಅದರಂತೆ ಪ್ರವರ್ಧಮಾನಕ್ಕೆ ಬರಲು ಪ್ರಾರಂಭಿಸಿತು. ಹೀಗಾಗಿ ಜಪಾನ್‌ನಲ್ಲಿ ಆರ್ಥಿಕತೆ ಅಭಿವೃದ್ಧಿ ಹೊಂದಲು ಪ್ರಾರಂಭಿಸಿತು. ಬುಲೆಟ್‌ ರೈಲಿನ ಕ್ರಾಂತಿಯಿಂದಾಗಿ ಜಪಾನ್‌ ದೇಶದ ರೈಲು ಸಂಬಂಧಿತ ಅಪಘಾತಗಳಿಂದ ಉಂಟಾಗುವ ಸಾವಿನ ಪ್ರಮಾಣವು ಸಂಪೂರ್ಣ ಶೂನ್ಯವಾಗಿದೆ. ಇದು ಜಪಾನ್‌ ದೇಶದಲ್ಲಿ ಹೆಚ್ಚಿನ ವೇಗದ ಬುಲೆಟ್ ರೈಲು ವ್ಯವಸ್ಥೆಯಿಂದ ತಂದಿರುವ ದೃಢತೆ ಮತ್ತು ದಕ್ಷತೆಗೆ ಸಾಕ್ಷಿಯಾಗಿದೆ.

ಜಪಾನ್ ಸಹಾಯದಿಂದ ಮುಂಬೈ ಮತ್ತು ಅಹಮದಾಬಾದ್ ನಡುವೆ 508 ಕಿಲೋಮೀಟರ್ ಉದ್ದದ ಬುಲೆಟ್ ರೈಲು ಮಾರ್ಗವನ್ನು ನಿರ್ಮಿಸಲು ಮೋದಿ ಸರ್ಕಾರ ಪ್ರಾರಂಭಿಸಿದೆ. 2017 ರಲ್ಲಿ, ಪ್ರಧಾನಿ ಮೋದಿ ಈ ಯೋಜನೆಯನ್ನು ಅಂದಿನ ಜಪಾನಿನ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಸಹ-ಸ್ಥಾಪಿಸಿದರು. ಯೋಜನೆಯ ಅಂದಾಜು ವೆಚ್ಚ ರೂ. 1.08 ಲಕ್ಷ ಕೋಟಿ. ಅದರಲ್ಲಿ ಶೇ.81ರಷ್ಟು ಹಣವನ್ನು ಜಪಾನ್‌ ದೇಶದಿಂದ ಎರವಲು ಪಡೆಯಲಾಗಿದೆ. ಡಿಸೆಂಬರ್ 2023 ರ ಹೊತ್ತಿಗೆ ಕನಿಷ್ಠ ಮೊದಲ ಪ್ರಯಾಣ ಮಾಡುವುದು ಈ ಯೋಜನೆಯ ಗುರಿಯಾಗಿದೆ. ಭಾರತವು 2022 ಕ್ಕೆ ಸ್ವಾತಂತ್ರ್ಯ ಪಡೆದು 75 ವರ್ಷ ಪೂರೈಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಅದೇ ವರ್ಷದ ಆಗಸ್ಟ್‌ನಲ್ಲಿ ಕೆಲವು 'ಬುಲೆಟ್' ರೈಲು ಸೇವೆಗಳನ್ನು ಪ್ರಾರಂಭಿಸಲು ಆಶಿಸುತ್ತಿದೆ. ಅಷ್ಟರ ಮಟ್ಟಿಗೆ ಬುಕೆಟ್‌ ರೈಲು ಪ್ರಾರಂಭದ ದಿನಾಂಕವನ್ನು ಮುಂದಕ್ಕೆ ತಳ್ಳಲಾಗಿದೆ.

ರೈತರಿಗೆ ಧೈರ್ಯ ತುಂಬಬೇಕು :ಬುಲೆಟ್ ರೈಲು ಗಂಟೆಗೆ 320 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಅಹಮದಾಬಾದ್‌ನಿಂದ ಮುಂಬೈಗೆ ಪ್ರಯಾಣದ ಸಮಯ 3 ಗಂಟೆ ಕಡಿಮೆ ಆಗುತ್ತದೆ ಎಂದು ರಾಷ್ಟ್ರೀಯ ಹೈ ಸ್ಪೀಡ್ ರೈಲು ನಿಗಮ (ಎನ್‌ಎಚ್‌ಎಸ್‌ಆರ್‌ಸಿ) ಹೇಳಿಕೊಂಡಿದೆ. ಆದರೂ, ಈ ಬುಲೆಟ್‌ ರೈಲು ಓಡಿಸುವ ಟ್ರ್ಯಾಕ್‌ಗೆ ಅಡಿಪಾಯ ಹಾಕಿದ ದಿನಾಂಕದಿಂದ 3 ವರ್ಷಗಳ ನಂತರವೂ, ಯೋಜನೆಯಲ್ಲಿ ಯಾವುದೇ ದೊಡ್ಡ ಪ್ರಗತಿ ಕಂಡುಬಂದಿಲ್ಲ. ಕಾರಿಡಾರ್‌ನ ನಿರ್ಮಾಣಕ್ಕಾಗಿ 1,380 ಹೆಕ್ಟೇರ್ ಭೂಮಿ ಅಗತ್ಯವಿದೆ. ಗುಜರಾತ್‌ನಲ್ಲಿ ಸುಮಾರು 940 ಹೆಕ್ಟೇರ್, ಮಹಾರಾಷ್ಟ್ರದ 431 ಹೆಕ್ಟೇರ್ ಮತ್ತು ದಾದ್ರನಗರ ಹವೇಲಿಯಲ್ಲಿ ಉಳಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದರಲ್ಲಿ, ಒಟ್ಟು 63% ಭೂಮಿಯನ್ನು ಮಾತ್ರ ಇಲ್ಲಿಯವರೆಗೆ ಸಂಗ್ರಹಿಸಲಾಗಿದೆ.

ಈ ಆಮೆಗತಿಯ ಪ್ರಗತಿಯನ್ನು ನೋಡಿದರೆ, ಅಹಮದಾಬಾದ್‌ ಮತ್ತು ಮುಂಬೈ ನಡುವಿನ ಬುಲೆಟ್‌ ರೈಲು ಓಡಿಸುವ ದಿನಾಂಕವನ್ನು ಕೇಂದ್ರ ಮತ್ತು ಎನ್‌ಎಚ್‌ಎಸ್‌ಆರ್‌ಸಿಎಲ್ 2028 ಕ್ಕೆ ಮುಂದೂಡಲು ಯೋಜಿಸುತ್ತಿದೆ ಎಂದು ತೋರುತ್ತದೆ. ಇಷ್ಟೇ ಅಲ್ಲ, ಯೋಜನೆ ಮುಂದೂಡಲ್ಪಟ್ಟರೆ ಆ ಮಟ್ಟಿಗೆ ಯೋಜನೆಯ ವೆಚ್ಚವೂ ಸಮನಾಗಿ ಹೆಚ್ಚಾಗುತ್ತದೆ! ವಾಸ್ತವವಾಗಿ, ಈ ಯೋಜನೆಯು ನಮ್ಮ ಆದ್ಯತೆಯ ಪಟ್ಟಿಯಲ್ಲಿ ಇರಲಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇತ್ತೀಚೆಗೆ ಮುಕ್ತ ಹೇಳಿಕೆ ನೀಡಿದ್ದಾರೆ. ಈ ಯೋಜನೆಯು ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಆಗಿರುವುದರಿಂದ ಮುಂಬೈ-ಅಹಮದಾಬಾದ್ ಬುಲೆಟ್‌ ರೈಲು ಯೋಜನೆಯನ್ನು ಠಾಕ್ರೆ ನಿರ್ಲಕ್ಷಿಸುತ್ತಿದ್ದಾರೆ ಎಂದು ಅವರು ಭಾವಿಸಿದ್ದಾರೆ.

ಆದರೆ, ನಮ್ಮ ಆದ್ಯತೆ ಅದಾಗಿರಲಿಲ್ಲ ಎಂದು ಉದ್ಧವ್‌ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. ಒಂದು ರಾಜ್ಯದ ಸಿಎಂ ಅವರು ಪ್ರತಿಷ್ಠಿತ ಯೋಜನೆ ಬಗ್ಗೆ ಆ ರೀತಿ ಮಾತನಾಡುವ ಸಂದರ್ಭದಲ್ಲಿ ಯಾವುದೇ ರೈತರು ಹೇಗೆ ತಮ್ಮ ಕೃಷಿ ಭೂಮಿಯನ್ನ ನೀಡಿ ರಾಜ್ಯ / ರಾಷ್ಟ್ರೀಯ ಅಭಿವೃದ್ಧಿಯ ಭಾಗವಾಗಲು ಮುಂದೆ ಬರುತ್ತಾರೆ ಎಂಬ ವದಂತಿಗಳು ಹರಡಿವೆ. ಕೃಷಿಯಲ್ಲೇ ಬದುಕು ಕಟ್ಟಿಕೊಂಡಿರುವ ರೈತರು ಬುಲೆಟ್‌ ರೈಲು ಯೋಜನೆಗಾಗಿ ತಮ್ಮ ಫಲವತ್ತಾದ ಭೂಮಿಯನ್ನ ನೀಡಿದರೆ ಜೀವನೋಪಾಯವನ್ನ ಕಳೆದುಕೊಂಡು ಬೀದಿಗೆ ಬಿದ್ದು ಹಾದಿ ತಪ್ಪುತ್ತಾರೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರಲ್ಲಿ ವಿಶ್ವಾಸವನ್ನು ಮೂಡಿಸಬೇಕು ಮತ್ತು ರೈತರ ಭವಿಷ್ಯಕ್ಕಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು.

ಬುಲೆಟ್ ರೈಲು ವ್ಯವಸ್ಥೆಯ ಪ್ರಾರಂಭದಿಂದ ದೇಶಕ್ಕೆ ಆಗುವ ಪ್ರಯೋಜನಗಳನ್ನು ಅವರಿಗೆ ವಿವರಿಸಬೇಕು. ಉತ್ತಮ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಬೇಕು. ಅವರ ಜಮೀನುಗಳ ವೆಚ್ಚವನ್ನು ಮಾರುಕಟ್ಟೆ ದರಕ್ಕಿಂತ ಕೆಲವು ಪಟ್ಟು ಹೆಚ್ಚು ಒದಗಿಸಬೇಕು. ಇವೇ ಮುಂತಾದ ಪುನರ್ವಸತಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಮನೆಯಿಲ್ಲದವರಿಗೆ ಹೊಸ ಮನೆಗಳನ್ನು ನಿರ್ಮಿಸುವುದು ಮತ್ತು ಅವರಿಂದ ತೆಗೆದ ಭೂಮಿಗೆ ಬದಲಾಗಿ ಬೇರೆಡೆ ಭೂಮಿಯನ್ನು ಹಂಚಿಕೆ ಮಾಡುವುದು. ಅಗತ್ಯವಿದ್ದರೆ ಸರ್ಕಾರಿ ಉದ್ಯೋಗಗಳನ್ನು ನೀಡಲು ಸರ್ಕಾರಗಳು ಮುಂದೆ ಬರಬೇಕು.ಇವೆಲ್ಲ ನಡೆದಾಗ ಮಾತ್ರ, ಬುಲೆಟ್ ರೈಲು ಕನಸನ್ನು ನನಸಾಗಿಸಲು ದೇಶವು ನಿಜವಾದ ಹೆಜ್ಜೆ ಇಟ್ಟಿದೆ ಎಂದು ಹೇಳಬಹುದು.

ABOUT THE AUTHOR

...view details